Webdunia - Bharat's app for daily news and videos

Install App

ನಾನು ಹೃದಯದಿಂದ ಗುಜರಾತಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ

Webdunia
ಸೋಮವಾರ, 24 ಅಕ್ಟೋಬರ್ 2016 (17:34 IST)
'ಗುಜರಾತಿ ಭಾಷೆ ಮಾತನಾಡದಿದ್ದರೂ, ಹೃದಯದಿಂದ ನಾನು ಗುಜರಾತಿ', ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿಕೊಂಡಿದ್ದಾರೆ. ಎರಡು ದಿನಗಳ ಮಟ್ಟಿಗೆ ಗುಜರಾತ್ ಪ್ರವಾಸದಲ್ಲಿರುವ ಮುಖರ್ಜಿ, ಈ ಹಿಂದೆ ನಾನು ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ.  

 
ನಾನು ಗುಜರಾತಿಗೆ ಹೊಸಬನಲ್ಲ. ಅವರು ( ರಾಜಕೀಯ ನಾಯಕರು) ನನ್ನನ್ನು ಈ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಸಹಾಯ ಮಾಡಿದರು. ನಾನು ಸಂಪೂರ್ಣ 6 ವರ್ಷ ರಾಜ್ಯಸಭೆಯಲ್ಲಿ ಗುಜರಾತ್‌ನನ್ನು ಪ್ರತಿನಿಧಿಸಿದ್ದೆ. ಹೀಗಾಗಿ ನಾನು ಗುಜರಾತಿ ಎಂದು ವಾದಿಸಬಲ್ಲೆ. ಆದರೆ ದುರದೃಷ್ಟವಶಾತ್ ನನಗೆ ಗುಜರಾತಿ ಮಾತನಾಡಲು ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಪ್ರಣವ್ ಮುಖರ್ಜಿ. 
 
ಭರೂಚ್ ಜಿಲ್ಲೆಯಲ್ಲಿ 'ಸೇವಾಶ್ರಮ್'  ಬಹು ವಿಶೇಷತೆ ಮತ್ತು  ಹೃದಯದ ಆಸ್ಪತ್ರೆ ಮತ್ತು  ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್ 
ಪುತ್ಥಳಿಯನ್ನು ಉದ್ಘಾಟಿಸಿ ಮಾತನ್ನಾಡುತ್ತಿದ್ದ ಅವರು, ನಾನಿದನ್ನು ವಾದಿಸುತ್ತಿಲ್ಲ, ಆದರೆ ನನ್ನ ಹೃದಯ ಈಗಲೂ ಗುಜರಾತಿ 
ಎಂದಿದ್ದಾರೆ. 
 
ಭಾರತದ ಇಬ್ಬರು ಮಹಾನ್ ಪುತ್ರರಾದ ಗಾಂಧಿ ಮತ್ತು ಪಟೇಲ್,  ಸ್ವಾತಂತ್ರ್ಯ ತಂದು ಕೊಟ್ಟಿದ್ದಷ್ಟೇ ಅಲ್ಲ, ದೇಶದ ಭವ್ಯ ಭವಿಷ್ಯಕ್ಕೆ ಭದ್ರ ನೆಲಗಟ್ಟನ್ನು ಕೂಡ ಹಾಕಿದರು ಎಂದು ರಾಷ್ಟ್ರಪತಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments