Select Your Language

Notifications

webdunia
webdunia
webdunia
webdunia

ಎತ್ತರದ ಈ ಮನುಷ್ಯನಿಗೆ ಹೆಣ್ಣಿನ ಬಾಧೆ

ಎತ್ತರದ ಈ ಮನುಷ್ಯನಿಗೆ ಹೆಣ್ಣಿನ ಬಾಧೆ
ಮೀರತ್ , ಬುಧವಾರ, 27 ಮೇ 2015 (12:12 IST)
ಭಾರತದಲ್ಲಿಯೇ ಅತ್ಯಂತ ಎತ್ತರದ ಮನುಷ್ಯ ಎಂಬ ಖ್ಯಾತಿಗೆ ಪಾತ್ರರಾಗಿರುವ ವ್ಯಕ್ತಿಯೋರ್ವರಿಗೆ ಪ್ರಸ್ತುತ ತಲೆಬೇನೆವೊಂದು ಶುರುವಾಗಿದೆ. ಅದೇನಪ್ಪಾ ಅಂದು ಅಂತ ಯೋಚಿಸುತ್ತಿದ್ದೀರಾ. ಹಾಗಾದರೆ ಮುಂದೆ ಓದಿ.
 
ದೇಶದ ಅತ್ಯಂತ ಎತ್ತರ ಮನುಷ್ಯ ಎಂಬ ಖ್ಯಾತಿಗೆ ಒಳಗಾಗಿರುವವರು ಧರ್ಮೇಂದ್ರ ಸಿಂಗ್. ಮೂಲತಃ ಮೀರತ್ ಮೂಲದವರು. ಇವರು 8 ಅಡಿ ಎತ್ತರವಿದ್ದು, ಪರಿಣಾಮ ನಡೆದಾಡಲು ಹಾಗೂ ಮನೆಗಳಲ್ಲಿ ಒಳ ಹಾಗೂ ಹೊರ ಹೋಗಲೂ ಕೂಡ ಕಷ್ಟ ಪಡುತ್ತಾರೆ. ಅಷ್ಟೇ ಅಲ್ಲ ಬಡತನದಲ್ಲಿರುವ ಇವರಿಗೆ ಉದ್ಯೋಗವೂ ಸಿಗುತ್ತಿಲ್ಲ ಎಂಬು ಮತ್ತೊಂದು ವಿಷಯ. ಏಕೆಂದರೆ ಅವರು ಅತಿ ಎತ್ತರವಾಗಿರುವ ಕಾರಣ ಉದ್ಯೋಗದಾತರು ಉದ್ಯೋಗ ನೀಡಲು ನಿರಾಕರಿಸುತ್ತಿದ್ದಾರೆ. 
 
ಇಷ್ಟಾದರೂ ಅವರ ದಡಿಮೆ ನಿಂತಿಲ್ಲ ಬಿಡಿ. ಏಕೆಂದರೆ ಅವರು ಸಾರ್ವಜನಿಕ ಸ್ಥಳಗಳಲ್ಲಿಯೇ ನಿಂತು ಸಾರ್ವಜನಿಕರೊಂದಿಗೆ ಪೋಸ್ ನೀಡಿ ತಮ್ಮ ಜೀವನವನ್ನು ದೂಡುತ್ತಿದ್ದಾರೆ. ಆದರೆ ಇವರಿಗೊಂದು ಕೊರಗಿರುವುದು ತನ್ನನ್ನು ವರಿಸಲು ಭಾರತದ ಯಾವ ಹೆಣ್ಣು ಮಗಳೂ ಕೂಡ ಇಚ್ಚಿಸುತ್ತಿಲ್ಲ ಎಂಬುದು. 
 
ಈ ಹಿನ್ನೆಲೆಯಲ್ಲಿ ಆತ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ನಾನು ಸಾಕಷ್ಟು ವರ್ಷಗಳಿಂದೆ ಅನೇಕ ಕುಟುಂಬಳಿಗೆ ಭೇಟಿ ನೀಡಿ ವಧು ವೀಕ್ಷಣೆಗೆ ಮುಂದಾಗಿದ್ದೇನೆ. ಆದರೆ ನನ್ನನ್ನು ವಿವಾಹವಾಗಲು ಯಾವೊಬ್ಬ ಹೆಣ್ಣು ಮಗಳೂ ಮನಸ್ಸು ತೋರುತ್ತಿಲ್ಲ. ಇದು ನನ್ನಲ್ಲಿ ಆಘಾತ ಉಂಟು ಮಾಡಿದೆ ಎಂದಿದ್ದಾರೆ. 

Share this Story:

Follow Webdunia kannada