Select Your Language

Notifications

webdunia
webdunia
webdunia
webdunia

ನಟನೆಯಲ್ಲಿ ನಾನು ಸೂಪರ್‌ಸ್ಟಾರ್ ನಟನಿಗಿಂತಲೂ ಕಡಿಮೆಯಲ್ಲ: ಲಾಲು ಯಾದವ್

ನಟನೆಯಲ್ಲಿ ನಾನು ಸೂಪರ್‌ಸ್ಟಾರ್ ನಟನಿಗಿಂತಲೂ ಕಡಿಮೆಯಲ್ಲ: ಲಾಲು ಯಾದವ್
ಪಾಟ್ನಾ , ಶುಕ್ರವಾರ, 8 ಜುಲೈ 2016 (20:29 IST)
ನಟನೆಯಲ್ಲಿ ಚಿತ್ರರಂಗದ ಯಾವುದೇ ಸೂಪರ್‌ಸ್ಟಾರ್‌ಗಿಂತ ನಾನೇನು ಕಡಿಮೆಯಲ್ಲ. ಒಂದು ವೇಳೆ, ನನ್ನ ಜೀವನದ ಬಗ್ಗೆ ಚಿತ್ರ ನಿರ್ಮಿಸಿದಲ್ಲಿ ನಾನೇ ನಟಿಸಲು ಇಷ್ಟಪಡುತ್ತೇನೆ ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. 
 
ಹಮ್ ಕಿಸಿ ಸ್ಟಾರ್ ಆ್ಯಕ್ಟರ್‌ ಸೇ ಕಮ್ ನಹೀ ಹೈ. ನನ್ನ ಜೀವನ ಆಧಾರಿತ ಚಿತ್ರ ನಿರ್ಮಾಣವಾದಲ್ಲಿ ಮುಖ್ಯಪಾತ್ರದಲ್ಲಿ ನಾನೇ ನಟಿಸಲು ಬಯಸುತ್ತೇನೆ  ಎಂದು ತಿಳಿಸಿದ್ದಾರೆ.
 
ಮದಾರಿ ಚಿತ್ರದ ಪ್ರಮೋಶನ್‌ಗಾಗಿ ಆಗಮಿಸಿದ್ದ ಬಾಲಿವುಡ್ ಇರ್ಫಾನ್ ಖಾನ್‌ರನ್ನು ಲಾಲು ಯಾದವ್ ನಿನ್ನೆ ರಾತ್ರಿ ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. 
 
ಚಿತ್ರದಲ್ಲಿ ನಾನು ಹೀರೋ ಪಾತ್ರದಲ್ಲಿ ನಟಿಸಲು ಬಯಸುತ್ತೇನೆ. ಚಿತ್ರದ ನಾಯಕಿಯ ಪಾತ್ರ ನಿಮ್ಮದಾಗಿರುತ್ತದೆ ಎಂದು ಲಾಲು ಯಾದವ್, ಇರ್ಫಾನ್‌ ಖಾನ್‌ಗೆ ಹೊಣೆ ಹೊರಿಸಿದ್ದಾರೆ. ಈ ಹಿಂದೆ ನಿರ್ಮಾಣವಾದ ಪದ್ಮಶ್ರೀ ಲಾಲು ಪ್ರಸಾದ್ ಯಾದವ್ ಚಿತ್ರದಲ್ಲಿ ಲಾಲು ಯಾದವ್ ನಟ ಸುನೀಲ್ ಶೆಟ್ಟಿಯೊಂದಿಗೆ ನಟಿಸಿದ್ದರು.
 
ಶಾಲಾ ಕಾಲೇಜು ದಿನಗಳಲ್ಲಿ ನನಗೆ ಸಿನೆಮಾಗಳನ್ನು ನೋಡುವುದು ತುಂಬಾ ಆಸಕ್ತಿಯ ವಿಷಯವಾಗಿತ್ತು. ಆವಾಗ ದಿಲೀಪ್ ಕುಮಾರ್ ನನ್ನ ಫೇವರೇಟ್ ನಟರಾಗಿದ್ದರು ಎಂದು ತಮ್ಮ ಗತಜೀವನವನ್ನು ನೆನಪಿಸಿಕೊಂಡಿದ್ದಾರೆ. ವೈಜಯಂತಿ ಮಾಲಾ ಮತ್ತು ಹೇಮಾಮಾಲಿನಿ ಅತ್ಯುತ್ತಮ ನಟಿಯರು ಎಂದು ಹೊಗಳಿದ್ದಾರೆ.
 
ಕಾಮಿಡಿ ನಟರಲ್ಲಿ ಜಾನಿ ವಾಕರ್ ತುಂಬಾ ಇಷ್ಟವಾಗುತ್ತಾರೆ. ಅವರು ಯಾವುದೇ ಸಂದರ್ಭದಲ್ಲಿ ನಗಿಸುವ ನಟನೆ ಹೊಂದಿದ್ದಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ 72 ಸಚಿವರು ಕರೋಡ್‌ಪತಿಗಳು