ನಾನು ಮುಲಾಯಂವಾದಿಯೇ ಹೊರತು ಸಮಾಜವಾದಿಯಲ್ಲ ಎಂದು ಹಿರಿಯ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.
ಅಮರ್‌ಸಿಂಗ್‌ರನ್ನು ಮರಳಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಲ್ಲದೇ ರಾಜ್ಯ ಸಭೆ ಟಿಕೆಟ್ ಕೂಡಾ ಘೋಷಿಸಿದ ಸಂದರ್ಭದಲ್ಲಿ ಅಮರ್ ಸಿಂಗ್ ಉಜ್ಜೈನಿಯ ಯಾತ್ರೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನನಗೆ ರಾಜ್ಯಸಭೆ ಟಿಕೆಟ್ ನೀಡಿರುವುದು ನೋಡಿದಲ್ಲಿ ಅವರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಎಂತಹದು ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಅಮರ್ ಸಿಂಗ್ ರಾಜಕೀಯದಿಂದ ದೂರವಾದರೂ ಅವರಿಗೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎನ್ನುವ ಉಹಾಪೋಹಗಳ ಮಧ್ಯೆ ಮತ್ತೆ ರಾಜ್ಯಸಭೆ ಟಿಕೆಟ್ ಗಿಟ್ಟಿಸಿದ್ದಾರೆ. ಒಂದು ವೇಳೆ ಆಯ್ಕೆಯಾದಲ್ಲಿ ನಾಲ್ಕನೇ ಬಾರಿಗೆ ರಾಜ್ಯಸಭೆಯನ್ನು ಪ್ರವೇಶಿಸಿದಂತಾಗುತ್ತದೆ.
ಪುತ್ರ ಅಖಿಲೇಶ್, ಸಹೋದರ ಶಿವಪಾಲ್ ಯಾದವ್, ಆಜಂಖಾನ್ ಮತ್ತು ರಾಮ್‌ಗೋಪಾಲ್ ಯಾದವ್ ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಅಮರ್ ಸಿಂಗ್‌ರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೆರಳು ಎಂದು ಬಿಂಬಿಸಲಾಗುತ್ತಿತ್ತು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.