Select Your Language

Notifications

webdunia
webdunia
webdunia
webdunia

ನಾಲಿಗೆಯನ್ನು ಕತ್ತರಿಸುತ್ತೇನೆ: ರಾಜಕೀಯ ಶತ್ರುಗಳಿಗೆ ಜೆಡಿಯು ಶಾಸಕನ ಬೆದರಿಕೆ

ನಾಲಿಗೆಯನ್ನು ಕತ್ತರಿಸುತ್ತೇನೆ: ರಾಜಕೀಯ ಶತ್ರುಗಳಿಗೆ ಜೆಡಿಯು ಶಾಸಕನ ಬೆದರಿಕೆ
ಪಾಟ್ಣಾ , ಮಂಗಳವಾರ, 1 ಮಾರ್ಚ್ 2016 (16:37 IST)
ಮಹಾ ಮೈತ್ರಿಕೂಟದ ಸರ್ಕಾರದ ಆಡಳಿತದಡಿಯಲ್ಲಿ  ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ತಮ್ಮ ಪಕ್ಷದ  ಕಾರ್ಯಕರ್ತರನ್ನು, ತನ್ನನ್ನು ಅವಮಾನಿಸದರೆ ನಿಮ್ಮ ನಾಲಿಗೆಯನ್ನು ಕತ್ತರಿಸುತ್ತೇನೆ ಎಂದು ಜೆಡಿಯು ಶಾಸಕನೊಬ್ಬ ವಿರೋಧ ಪಕ್ಷದವರಿಗೆ ಬೆದರಿಕೆ ಒಡ್ಡಿದ್ದಾನೆ. 
 
ಈ ಗೂಂಡಾಗಿರಿ ಪ್ರದರ್ಶಿಸಿದ ಶಾಸಕನನ್ನು ನರೇಂದ್ರ ಕುನಾರ್ ನೀರಜ್ ಅಲಿಯಾಸ್ ಗೋಪಾಲ್ ಮಂಡಲ್ ಎಂದು ಗುರುತಿಸಲಾಗಿದ್ದು  ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಆತ ತಮ್ಮ ಪಕ್ಷದ ಕಾರ್ಯರ್ಕತರಿಗೆ ಬೆದರಿಕೆ ಒಡ್ಡುವವರ ನಾಲಿಗೆಯನ್ನು ಒಂದು ನಿಮಿಷದಲ್ಲಿಯೇ ಕತ್ತರಿಸಿ ಹಾಕುತ್ತೇನೆ ಎಂದು ಬಹಿರಂಗವಾಗಿ ಬೆದರಿಕೆ ಒಡ್ಡಿದ್ದಾನೆ. 
 
ನಾನು ಯಾರಿಗು ಕೂಡ ಬೆದರುವುದಿಲ್ಲ. ವಿರೋಧಿಗಳನ್ನು ಶೂಟ್ ಮಾಡಲು ಕೂಡ ನಾನು ತಯಾರಿದ್ದೇನೆ ಎಂದು ಈಗಾಗಲೇ ಜೈಲಿಗೆ ಹೋಗಿ ಬಂದಿರುವ ಶಾಸಕ ಹೇಳಿದ್ದಾನೆ. 
 
ಭಾಗಲ್ಪುರ ಜಿಲ್ಲೆಯ ನವಗಚಿಯಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭಧಲ್ಲಿ ಅವರು ಮಾತನಾಡುತ್ತಿದ್ದರು. 
 
ನಾನು ಮೊದಲು ಗೋಪಾಲ್ ಮಂಡಲ್, ಬಳಿಕ ಶಾಸಕ, ಸಮಾಜದಲ್ಲಿ ನಾನು ನನ್ನದೇ ಆದ ಸ್ಥಾನಮಾನವನ್ನು ಹೊಂದಿದ್ದೇನೆ ಎಂದು ಆವಾಜ್ ಹಾಕಿದ್ದಾನೆ. 
 
ನರೇಂದ್ರ ಮೋದಿ ಸರ್ಕಾರದವರಾಗಲಿ, ತನ್ನದೇ ಪಕ್ಷದ ನಿತೀಶ್ ಕುಮಾರ ಸರ್ಕಾರದವರಾಗಲಿ ತನ್ನನ್ನು ಅವಮಾನಿಸಿದರೆ ಅವರಿಗೆ ಬದುಕುವ ಹಕ್ಕಿಲ್ಲ ಎನ್ನುವುದು ಮಂಡಲ್ ನೀತಿ. 

Share this Story:

Follow Webdunia kannada