Webdunia - Bharat's app for daily news and videos

Install App

ನಾನು ಪಾಕಿಸ್ತಾನಿ, ಭಾರತೀಯರನ್ನು ಕೊಲ್ಲಲ್ಲು ಬಂದಿದ್ದೇನೆ

Webdunia
ಶುಕ್ರವಾರ, 29 ಜುಲೈ 2016 (07:45 IST)
"ನಾನು ಪಾಕಿಸ್ತಾನಿ, ಭಾರತೀಯರನ್ನು ಕೊಲ್ಲಲ್ಲು ಇಲ್ಲಿಗೆ ಬಂದಿದ್ದೇನೆ", ಬುಧವಾರ ರಾಷ್ಟ್ರೀಯ ತನಿಖಾ ದಳದವರ ಕೈಯ್ಯಿಗೆ ಸಿಕ್ಕಿ ಹಾಕಿಕೊಂಡಿರುವ ಉಗ್ರ ಸಫಿವುಲ್ಲಾ ಬಹಾದೂರ್ ಅಲಿ  ಬಾಯ್ಬಿಟ್ಟ ಸತ್ಯವಿದು. ಲಷ್ಕರ್- ಇ-ತೈಬಾದ ಇತರೆ ಉಗ್ರರಂತೆ ಈತ ಕೂಡ  ಮುಜಫ್ಪರಾಬಾದ್ ಮೂಲಕ ಭಾರತಕ್ಕೆ ನುಸುಳಿದ್ದ.

ಸ್ಥಳೀಯರ ಸಹಾಯದ ಮೂಲಕ ಅಲಿ ಮತ್ತಿಬ್ಬರು ಉಗ್ರರು ಭಾರತವನ್ನು ಪ್ರವೇಶಿಸಿದ್ದರು ಎಂದು ಎನ್‌ಐಗೆ ಮಾಹಿತಿ ಲಭಿಸಿದೆ.

ಸಾದ್ ಭಾಯ್ ಮತ್ತು ದರ್ದಾ ಭಾಯ್ ಜತೆಗೆ ಸ್ಥಳೀಯ ಮಾರ್ಗದರ್ಶಕರ ಸಹಾಯದಿಂದ ನಾನು ಭಾರತಕ್ಕೆ ಬಂದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸರಣಿ ಸ್ಪೋಟ ಮಾಡುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿಯೇ ನಮಗೆ ವಿಶೇಷ ತರಬೇತಿಯನ್ನು ನೀಡಲಾಗಿತ್ತು.  ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಒಳನುಸುಳುವಿಕೆಗೆ ಸಹಾಯಕಾರಿ ಎಂಬುದು ನಮ್ಮ ಯೋಚನೆಯಾಗಿತ್ತು ಎಂದಾತ ಬಾಯ್ಬಿಟ್ಟಿದ್ದಾನೆ.

ನಿನ್ನ ರಾಷ್ಟ್ರೀಯತೆ ಬಗ್ಗೆ ಬಹಿರಂಗ ಪಡಿಸು ಮತ್ತು ಕುಪ್ವಾರದಲ್ಲಿ ಬಂಧನಕ್ಕೊಗಾಗುವಾಗ ನೀನು ಅಲ್ಲೇನು ಮಾಡಿಕೊಂಡಿದ್ದೆ ಎಂದು ಕೇಳಲಾಗಿ, ನಾನು ಪಾಕಿಸ್ತಾನಿ, ಲಾಹೋರಿನ ರೈವಿಂಡ್ ಪ್ರದೇಶದ ನಿವಾಸಿಯಾಗಿದ್ದೇನೆ. ಕೆಲ ವರ್ಷಗಳ ಹಿಂದೆ ನಾನು  ಲಷ್ಕರ್- ಇ-ತೈಬಾವನ್ನು ಸೇರಿದ್ದೆ ಮತ್ತು ಮುಜಫ್ಪರಾಬಾದ್‌ನಲ್ಲಿ ತರಬೇತಿ ಪಡೆದುಕೊಂಡಿದ್ದೆ ಎಂದಾತ ಹೇಳಿದ್ದಾನೆ.

ನನ್ನ ಜತೆ ಇದ್ದ ಸಾದ್ ಮತ್ತು ದರ್ದಾ ಭದ್ರತಾ ಸಿಬ್ಬಂದಿಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದರು. ಆದರೆ ನಾನು ಕಾರ್ಯಾಚರಣೆಯನ್ನು ಮುಂದುವರೆಸಲು ನಿರ್ಧರಿಸಿದೆ. ನಾನು ಸಂಘಟನೆಯ ಆದೇಶಕ್ಕೆ ಕಾಯುತ್ತಿದ್ದೆ. ಮಿಷನ್ ಪೂರ್ತಿಗೊಳಿಸಲು ಮತ್ತಿಬ್ಬರನ್ನು ಕಳುಹಿಸುವುದಾಗಿ ನನಗೆ ತಿಳಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ನಮಗೆ ತಿಳಿಸಲಾಗಿತ್ತು ಎಂದಾತ ಸ್ಪೋಟಕ ಮಾಹಿತಿಯನ್ನು ಹೊರಗೆ ಹಾಕಿದ್ದಾನೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments