Select Your Language

Notifications

webdunia
webdunia
webdunia
webdunia

ನಕಲಿ ಫೇಸ್‌ಬುಕ್ ಖಾತೆ ತೆರೆದು ಪತ್ನಿಯ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ಪತಿಮಹಾಶಯ

ನಕಲಿ ಫೇಸ್‌ಬುಕ್ ಖಾತೆ ತೆರೆದು ಪತ್ನಿಯ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ಪತಿಮಹಾಶಯ
ಹೈದ್ರಾಬಾದ್ , ಶನಿವಾರ, 18 ಏಪ್ರಿಲ್ 2015 (15:20 IST)
ಪತ್ನಿಯ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆಗೆದು ಆಕೆಯ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾಫ್ಟ್‌ವೇರ್ ವೃತ್ತಿಯಲ್ಲಿರುವ ಅಣ್ಣಮ್ಮರಾಜು ವೆಂಕಟ ರಾಘವೇಂದ್ರ ರಾವ್ ತನ್ನ ಪತ್ನಿಯ ಹೆಸರಲ್ಲಿ ಫೇಸ್‌ಬುಕ್ ನಕಲಿ ಖಾತೆ ತೆಗೆದು ಆಕೆಯ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಲ್ಲದೇ ಚಿತ್ರಗಳ ಕೆಳಗೆ ನನ್ನ ಕುಟುಂಬವನ್ನು ಮತ್ತು ಪತಿಯನ್ನು ಹೇಗೆ ವಂಚಿಸುತ್ತಿರುವ ವಿಡಿಯೋ ನೋಡಿ ನನ್ನನ್ನು ಅಭಿನಂದಿಸಿ ಎಂದು ಬರೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಕಳೆದ 2011ರ ನವೆಂಬರ್‌ನಲ್ಲಿ ಆರೋಪಿ ವಿವಾಹವಾಗಿದ್ದು ಆತನಿಗೆ ಹೆಣ್ಣುಮಗುವಿದೆ ಎನ್ನಲಾಗಿದೆ.

ಏತನ್ಮಧ್ಯೆ, ಕೆಲ ಕೌಟಂಬಿಕ ಕಾರಣಗಳಿಂದಾಗಿ ಆಗಸ್ಟ್ 2013 ರಿಂದ ಪತ್ನಿಯನ್ನು ತೊರೆದು ಆರೋಪಿ ಪ್ರತ್ಯೇಕವಾಗಿ ವಾಸಿಸುತ್ತಿದ್ದನು. 2014 ನವೆಂಬರ್ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಪತ್ನಿಯ ಅಶ್ಲೀಲ ದೃಶ್ಯಗಳಿರುವ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಿ ತನ್ನ ಮತ್ತು ಪತ್ನಿಯ ಸಂಬಂಧಿಕರಿಗೆಲ್ಲ ಕಳುಹಿಸಿ ಆಕೆಯ ನಡತೆಯ ಬಗ್ಗೆ ಸಂಶಯ ಬರುವಂತೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  

ಆರೋಪಿಯ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Share this Story:

Follow Webdunia kannada