Select Your Language

Notifications

webdunia
webdunia
webdunia
webdunia

ಛಿ.. ನಾಚಿಗೇಡು.. ಸಿಟ್ಟಿಗೆದ್ದ ಪತಿ, ಪತ್ನಿಯನ್ನೇ ನಗ್ನಗೊಳಿಸಿ ಗ್ರಾಮವೆಲ್ಲಾ ಸುತ್ತಾಡಿಸಿದ್ದಾನೆ

ಛಿ.. ನಾಚಿಗೇಡು.. ಸಿಟ್ಟಿಗೆದ್ದ ಪತಿ, ಪತ್ನಿಯನ್ನೇ ನಗ್ನಗೊಳಿಸಿ ಗ್ರಾಮವೆಲ್ಲಾ ಸುತ್ತಾಡಿಸಿದ್ದಾನೆ
ಛತ್ತಿಸ್‌ಘಡ್‌: , ಶನಿವಾರ, 23 ಆಗಸ್ಟ್ 2014 (17:19 IST)
ಛತ್ತಿಸಘಡ್‌‌ದ ಕಬೀರಧಾಮ್ ಜಿಲ್ಲೆಯ ಗ್ರಾಮವೊಂದರಲ್ಲಿ, ಪತಿ-ಪತ್ನಿಯರ ನಡುವೆ ಕಲಹ ಉಂಟಾದ ಹಿನ್ನಲೆಯಲ್ಲಿ, ಪತಿ ಗ್ರಾಮಸ್ಥರ ಎದುರು ‌ತನ್ನ ಪತ್ನಿಯನ್ನು ನಗ್ನವನ್ನಾಗಿಸಿ ಪೂರ್ತಿ ಗ್ರಾಮದಲ್ಲಿ ಸುತ್ತಾಡಿಸಿದ್ದಾನೆ. ಆದರೆ, ಈ ಪ್ರಕರಣದ ಕುರಿತು ಪತ್ನಿ ಪೋಲಿಸರಿಗೆ ಯಾವುದೇ ದೂರು ಸಲ್ಲಿಸಿಲ್ಲ. 
 
ಪತಿ-ಪತ್ನಿಯರ ನಡುವೆ ಕಲಹವಿತ್ತು, ಆದರೆ ಪತ್ನಿ ಯಾವುದೇ ರೀತಿಯ ದೂರನ್ನು ನೀಡದ ಕಾರಣ ಈ ಪ್ರಕರಣದ ಪ್ರಾಥಮಿಕ ದೂರು ದಾಖಲಾಗಿಲ್ಲ ಎಂದು ಸಹಸಪುರ ಠಾಣೆಯ ಅಧಿಕಾರಿ ಸತೀಶ್‌ ಸಿಂಗ್‌ ತಿಳಿಸಿದ್ದಾರೆ.  
 
ಮೂಲಗಳ ಪ್ರಕಾರ, ಕೊಯಲಾರಿ ಗ್ರಾಮದಲ್ಲಿ ಮನೀರಾಮ್‌  ಸಾಹು(40) ಯಾವುದೋ ಒಂದು ವಿಷಯಕ್ಕೆ ಪತ್ನಿಯ ಜೊತೆ ಜಗಳವಾಡಿದ್ದನು. ಈ ಮಹಿಳೆ ಆತನ ಎರಡನೇ ಪತ್ನಿಯಾಗಿದ್ದು, ಇವರಿಗೆ ಮೂವರು ಮಕ್ಕಳು ಕೂಡಾ ಇದ್ದಾರೆ. ಈ ಕಲಹ ಇಷ್ಟಕ್ಕೆ ನಿಲ್ಲದೆ, ಸಿಟ್ಟಿಗೆದ್ದ ಪತಿ, ಪತ್ನಿಗೆ ಹೊಡೆಯುವದಲ್ಲದೆ ಆಕೆಯನ್ನು ನಿರ್ವಸ್ತ್ರಗೊಳಿದ. ಇಷ್ಟಕ್ಕು ತೃಪ್ತಿಯಾಗದ ಪತಿ, ನಗ್ನ ಸ್ಥಿತಿಯಲ್ಲಿರುವ ಪತ್ನಿಯನ್ನು ಗ್ರಾಮದ ಗಲ್ಲಿಗಳಲ್ಲಿ ಮತ್ತು ನಾಲ್ಕು ರಸ್ತೆ ಸೇರುವಲ್ಲಿ ಕರೆದುಕೊಂಡು ಬಂದ. 
 
ಈ ಸಂದರ್ಭದಲ್ಲಿ ಸಮಯ ಬೆಳಿಗ್ಗೆ ಏಳು ಗಂಟೆಯಾಗಿತ್ತು ಮತ್ತು ಹೆಚ್ಚಿನ ಗ್ರಾಮಸ್ಥರು ತಮ್ಮ ನಿತ್ಯಕರ್ಮದಲ್ಲಿ ನಿರತರಾಗಿದ್ದರು. ಮಹಿಳೆಯರು ಹ್ಯಾಂಡ್‌‌ಪಂಪ್‌‌‌ನಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದರು. ಪತಿಯ ಈ ಕೃತ್ಯ ನೋಡಿ ಗ್ರಾಮಸ್ಥರಿಗೆ ನಾಚಿಕೆಯಾಯಿತು. ತಕ್ಷಣ ಗ್ರಾಮಸ್ಥರು ಪೋಲಿಸರಿಗೆ ಈ ಮಾಹಿತಿ ತಿಳಿಸಿದರು. 
 
ಮಾಹಿತಿ ತಿಳಿದ ತಕ್ಷಣ ಪೋಲಿಸರು ಘಟನಾ ಸ್ಥಳಕ್ಕೆ ಬಂದಾಗ, ಪತಿ ತನ್ನ ಪತ್ನಿಯನ್ನು ಮನೆಗೆ ತಲುಪಿಸಿದ್ದನು. ಫೋಲಿಸರು ಆತನ ಮನೆಗೆ ಹೋದಾಗ ಆತನ ಪತ್ನಿ ವಸ್ತ್ರಧರಿಸಿಕೊಂಡು ಮನೆ ಹೊರಗಡೆ ಚಿಕ್ಕ ಮಗಳನ್ನು ಹಿಡಿದುಕೊಂಡು ಕುಳಿತಿದ್ದಳು. ಆರೋಪಿ ಪತಿ ತನ್ನ ಮನೆಯಲ್ಲಿ ಮಲಗಿಕೊಂಡಿದ್ದನು ಎಂದು ಪೋಲಿಸ್‌ ಮೂಲಗಳು ತಿಳಿಸಿವೆ. 

Share this Story:

Follow Webdunia kannada