ಏಕಾಏಕಿ 500 ಮತ್ತು 1,000 ರೂಪಾಯಿ ಮುಖಬೆಲೆಯನ್ನು ನಿಷೇಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ದಿಗ್ಭಾಂತಿಗೆ ದೂಡಿದ್ದಾರೆ. ಇದು ಸಾಮಾನ್ಯ ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದಿಟ್ಟರೂ ಪ್ರಧಾನಿಯವರ ನಿರ್ಧಾರವನ್ನವರು ತುಂಬು ಮನಸ್ಸಿನಿಂದ ಸ್ವಾಗತಿಸಿದ್ದಾರೆ.
ಆದರೆ ಕಪ್ಪುಹಣವನ್ನು ಕೂಡಿಟ್ಟುಕೊಂಡಿರುವ ತೆರಿಗೆ ಕಳ್ಳರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಅವರೀಗ ಗೂಗಲ್ ಮೊರೆ ಹೋಗಿದ್ದಾರೆ. ಕಪ್ಪುಹಣವನ್ನು ಬಿಳಿ ಹಣವನ್ನಾಗಿಸುವುದು ಹೇಗೆ ಎಂದು ತಡಕಾಡುತ್ತಿದ್ದಾರೆ. 'How to Convert Black Money to White Money' ಎಂದು ಟೈಪ್ ಮಾಡಿ ಗೂಗಲ್ ಸರ್ಚ್‌ನಲ್ಲಿ ಪರಿಹಾರ ಕಂಡುಕೊಂಡು ತಾವು ಗಳಿಸಿರುವ ಅಕ್ರಮ ಹಣವನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಪ್ರಧಾನಿ ಹೆಚ್ಚಿನ ಮುಖಬೆಲೆ ನೋಟುಗಳನ್ನು ರದ್ದುಗೊಳಿಸಿದ ಬಳಿಕ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ಕಂಡ ಪ್ರಶ್ನೆ ಇದಾಗಿದೆ.
ಪ್ರಧಾನಿ ಮೋದಿ ತವರಾದ ಗುಜರಾತ್ ರಾಜ್ಯದಲ್ಲಿ ಈ ಪ್ರಶ್ನೆ ಅತಿ ಹೆಚ್ಚು ಹುಡುಕಲ್ಪಟ್ಟಿದ್ದು, ನಂತರದ ಸ್ಥಾನ ಮಹಾರಾಷ್ಟ್ರ ಮತ್ತು ಹರ್ಯಾಣ ಪಡೆದಿವೆ. ಮಹಾರಾಷ್ಟ್ರ ಹಣಕಾಸು ಹಬ್ ಮುಂಬೈ ನೆಲೆಯಾಗಿದ್ದರೆ, ಹರ್ಯಾಣ ಕಳೆದ ಕೆಲ ವರ್ಷಗಳಿಂದ ವಿವಾದಾತ್ಮಕ ರಿಯಲ್ ಎಸ್ಟೆಟ್ ಡೀಲ್‌ಗಳಿಂದ ಗುರುತಿಸಿಕೊಂಡಿದೆ. ಈ ವಿವಾದಗಳಲ್ಲಿ ಕೆಲವು ಕಾಂಗ್ರೆಸ್ ಪಕ್ಷದೊಂದಿಗೂ ನಂಟನ್ನು ಹೊಂದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ