ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಸುರೇಶ್ ಗೋಪಿ ಮೇಲೆ ಜನರಿಗ್ಯಾಕೆ ಒಲವು

Krishnaveni K
ಮಂಗಳವಾರ, 4 ಜೂನ್ 2024 (14:27 IST)
ತ್ರಿಶ್ಶೂರ್: ಕೇರಳದಲ್ಲಿ ಮೊದಲ ಬಾರಿಗೆ ಕಮಲವರಳಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ತ್ರಿಶ್ಶೂರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಅವರು ಹೊಸ ದಾಖಲೆಯನ್ನೇ ಮಾಡಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಮತ ಪ್ರಮಾಣ ಹೆಚ್ಚಿಸಿಕೊಂಡಿತ್ತು. ಇಡೀ ದೇಶದಲ್ಲೇ ಭರ್ಜರಿ ಬಹುಮತ ಸಾಧಿಸಿದ್ದರೂ ಕೇರಳದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿರಲಿಲ್ಲ.

ಆದರೆ ಇದೇ ಮೊದಲ ಬಾರಿಗೆ ದೇವರನಾಡಿನಲ್ಲಿ ಕಮಲವರಳಿಸಲು ಸುರೇಶ್ ಗೋಪಿ ಯಶಸ್ವಿಯಾಗಿದ್ದಾರೆ. ಸುರೇಶ್ ಗೋಪಿ ಈ ಮೊದಲು ರಾಜ್ಯಸಭೆ ಸಂಸದರಾಗಿ ಕೆಲಸ ಮಾಡಿದ್ದರು. ಸ್ಥಳೀಯವಾಗಿ ಉತ್ತಮ ಕೆಲಸಗಾರ ಎಂಬ ಖ್ಯಾತಿ ಹೊಂದಿದ್ದಾರೆ.

ಜೊತೆಗೆ ಸಿನಿಮಾ ನಟನಾಗಿ ಜನರ ಪ್ರೀತಿ ಗಳಿಸಿದ್ದವರು. ಹೀಗಾಗಿ ಸುರೇಶ್ ಗೋಪಿಗೆ ಗೆಲ್ಲಲು ಸಾಧ್ಯವಾಗಿದೆ. ಕೇರಳದ ತಿರುವನಂತಪುರಂನಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯಿತ್ತು. ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಆರಂಭಿಕ ಮುನ್ನಡೆ ಹೊಂದಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಗರಹಾವಿನಂತಿರುವ ನಕ್ಸಲಿಸಂ ಪದೇ ಪದೇ ಹೆಡೆ ಬಿಚ್ಚಿ ವಿಷ ಕಾರುತ್ತಿರುತ್ತದೆ: ಅಮಿತ್ ಶಾ

ಮನೆಯೊಳಗೆ ಇರುವಂತೆ ಮಾಡಿದ ರಾಷ್ಟ್ರ ರಾಜಧಾನಿ ವಾಯುಮಾಲಿನ್ಯ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಮುಂದಿನ ಸುದ್ದಿ
Show comments