Select Your Language

Notifications

webdunia
webdunia
webdunia
webdunia

ಕಲಾಂ ಅಂತಿಮ ವಿಧಿ-ವಿಧಾನ ಪ್ರಕ್ರಿಯೆ ಹೇಗಾಯಿತು ?

ಕಲಾಂ ಅಂತಿಮ ವಿಧಿ-ವಿಧಾನ ಪ್ರಕ್ರಿಯೆ ಹೇಗಾಯಿತು ?
ರಾಮೇಶ್ವರಂ , ಗುರುವಾರ, 30 ಜುಲೈ 2015 (11:57 IST)
ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ತಮಿಳುನಾಡಿನ ರಾಮೇಶ್ವರಂ ಬಳಿಯ ಅಂತ್ಯಕ್ರಿಯೆಗೆ ನಿಗಪಡಿಸಲಾಗಿದ್ದ ಸ್ಥಳ ಪೆಯಿಕರುಂಬುವಿಗೆ ತಂದು ಇಲ್ಲಿನ ಪೆರಿಯಗುಂಡು ಮೈದಾನದಲ್ಲಿ ಮುಸ್ಲಿಂ ಸಂಪ್ರದಾಯದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗಿದೆ. 
 
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರತಿನಿಧಿಗಳು, ಗಣ್ಯರು ಕುಟುಂಬಸ್ಥರು ಹಾಗೂ ಸಂಬಂಧಿಗರು ಅಂತಿಮ ನಮನ ಸಲ್ಲಿಸಿದ ತರುವಾಯ ಅಂತ್ಯ ಸಂಸ್ಕಾರ ಮಾಡಲಾಯಿತು. 
 
ಅಂತ್ಯ ಸಂಸ್ಕಾರ ನಡೆದದ್ದು ಹೇಗೆ ?:
ವಿಧಿ-ವಿಧಾನ ನೆರವೇರಿಸಲು ಮುಂದಾದ ಸೇನಾ ಸಿಬ್ಬಂದಿ ಗೌರವ ಸೂಚಕವಾಗಿ ಕಲಾಂ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರದ ತ್ರಿವರ್ಣ ಧ್ವಜವನ್ನು ತೆರವುಗೊಳಿಸಿ ಮುಂದಿನ ಕಾರ್ಯಕ್ಕೆ ಮುಂದಾದರು. ಬಳಿಕ ಕುಟುಂಬಸ್ಥರು ಹಾಗೂ ಸಂಬಂಧಿಕರು ಮುಸ್ಲಿಂ ಧರ್ಮದ ವಿಧಿ-ವಿಧಾನದಂತೆ ಧರ್ಮಗುರುಗಳ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತರುವಾಯ ರಾಷ್ಟ್ರದ ಮೂರೂ ಸೇನೆಗಳಿಂದ ಗೌರವ ಸಮರ್ಪಿಸಿ ಸರ್ಕಾರಿ ಗೌರವಗಳೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಮಣ್ಣಿನಲ್ಲಿ ಹೂಳಲಾಯಿತು. 

Share this Story:

Follow Webdunia kannada