Webdunia - Bharat's app for daily news and videos

Install App

ವಿದ್ಯುತ್ ರಿಪೇರಿಗೆ ಬಂದವನು ರೇಪ್ ಎಸಗಿ ಪರಾರಿಯಾದ

Webdunia
ಶುಕ್ರವಾರ, 10 ಏಪ್ರಿಲ್ 2015 (15:39 IST)
ಇಬ್ಬರು ಗಂಡು ಮಕ್ಕಳಿರುವ 49 ವರ್ಷದ ಮಹಿಳೆಯ ಮೇಲೆ ಎಲೆಕ್ಟ್ರಿಷಿಯನ್ ಒಬ್ಬ ಅತ್ಯಾಚಾರ ಎಸಗಿದ ಘಟನೆ ಕೋಲಕತ್ತಾದ ಸಂತೋಷ್ಪುರದಲ್ಲಿ ನಡೆದಿದೆ. ಇದು ಸುರಕ್ಷಿತ ನಗರವೆಂಬ ಖ್ಯಾತಿಯನ್ನು ಪಡೆದಿದ್ದ ಕೋಲಕತ್ತಾದ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. 

 
ಮಹಿಳೆಗೆ ಇಬ್ಬರು ಮಕ್ಕಳಿದ್ದು ಒಬ್ಬ  ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ಕಾಲೇಜಿನಲ್ಲಿ ಓದುತ್ತಿದ್ದಾನೆ.  ಅವರ ನಿವಾಸದಲ್ಲಿ ವಿದ್ಯುತ್ ತಂತಿಗಳನ್ನು ಬದಲಿಸಲಾಗುತ್ತಿದ್ದು ಆರೋಪಿ ಬಿಕಾರಾಮ್ ಮತ್ತು ಇನ್ನೊಬ್ಬ ಎಲೆಕ್ಟ್ರಿಷಿಯನ್ ಕಳೆದ ಕೆಲ ದಿನಗಳಿಂದ ಈ ಕೆಲಸಕ್ಕೆಂದು ಬರುತ್ತಿದ್ದರು. ಹೀಗಾಗಿ ಮನೆಯ ಸದಸ್ಯರ ಚಲನವಲನಗಳ ಬಗ್ಗೆ ಬಿಕಾರಾಮ್ ಕೂಲಂಕಷವಾಗಿ ತಿಳಿದುಕೊಂಡಿದ್ದ. 
 
ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ತನ್ನ ಕೆಲಸವನ್ನು ಪ್ರಾರಂಭಿಸಿದ ಬಿಕಾರಾಮ್ ಪೀಡಿತಳ ಮನೆಯ ಕದ ಬಡಿದು ಬಾಕಿ ಇರುವ ಎಲೆಕ್ಟ್ರಿಕ್ ಕೆಲಸ ಮುಗಿಸಲು ಬಂದಿರುವುದಾಗಿ ಹೇಳಿದ. ಕದ ತೆಗೆದ ತಕ್ಷಣ ಮಹಿಳೆ ಒಬ್ಬಳೇ ಇರುವುದನ್ನು ಅರಿತ ಆತ  ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆತ ಹಿಂತಿರುಗಿದ ತಕ್ಷಣ ಪೊಲೀಸ್ ಸಹಾಯವಾಣಿಗೆ( 100) ಕರೆ ಮಾಡಿದ ಮಹಿಳೆ ಘಟನೆಯ ಕುರಿತು ವಿವರಿಸಿದ್ದಾಳೆ. 
 
ಪರಾರಿಯಾಗಿದ್ದ ಆತನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆರೋಪಿಯ ಮುಖದಲ್ಲಿ ತಾನು ತಪ್ಪು ಮಾಡಿರುವ ಕುರಿತು ಯಾವುದೇ ರೀತಿಯ ಪಶ್ಚಾತಾಪ ಭಾವ ಕಂಡು ಬಂದಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments