Select Your Language

Notifications

webdunia
webdunia
webdunia
webdunia

ಗೋವಾ ಬೀಚ್‌ನಲ್ಲಿ 500 ಕನ್ನಡಿಗರ ಮನೆ ನೆಲಸಮ

ಗೋವಾ ಬೀಚ್‌ನಲ್ಲಿ 500 ಕನ್ನಡಿಗರ ಮನೆ ನೆಲಸಮ
ಪಣಜಿ , ಬುಧವಾರ, 30 ಸೆಪ್ಟಂಬರ್ 2015 (15:52 IST)
ಬೈನಾ ಬೀಚ್‌ನಲ್ಲಿ ಅನುಮತಿ ಇಲ್ಲದೇ ನಿರ್ಮಿಸಿಕೊಂಡಿದ್ದ ಕನ್ನಡಿಗರ ಮನೆಗಳನ್ನು ನಾಶ ಮಾಡುವುದರ ಮೂಲಕ ಗೋವಾ ಸರ್ಕಾರ 500 ಜನ ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿದೆ. 
 
ಕಳೆದ 10 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಬೀಚ್‌ನಲ್ಲಿ ವಾಸವಾಗಿದ್ದ ಕನ್ನಡಿಗರ 157 ಗುಡಿಸಲುಗಳನ್ನು ಗೋವಾ ಸರ್ಕಾರ ನಾಶ ಮಾಡಿದೆ. ಪೀಡಿತ ಕನ್ನಡಿಗರು  ತಮ್ಮನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಲು ಮಧ್ಯ ಪ್ರವೇಶಿಸುವಂತೆ ಕರ್ನಾಟಕ ಸರ್ಕಾರವನ್ನು ಕೋರಿಕೊಂಡಿದ್ದಾರೆ. 
 
ಬೈನಾ ಬೀಚ್‌ನಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಬಹುಸಂಖ್ಯಾತರು ಉತ್ತರ ಕರ್ನಾಟಕದ ಬಡ ಹಿಂದುಳಿದ ಜಿಲ್ಲೆಗಳಿಂದ ವಲಸೆ ಬಂದವರಾಗಿದ್ದಾರೆ.ಕೃಷಿ ಕಾರ್ಮಿಕರಾಗಿದ್ದ ಅವರು ಉದ್ಯೋಗವನ್ನು ಅರಸಿ ಹಲವು ವರ್ಷಗಳ ಹಿಂದೆ ನೆರೆ ರಾಜ್ಯ ಗೋವಾಕ್ಕೆ ವಲಸೆ ಹೋಗಿದ್ದರು. ಬೀಚ್‌ನಲ್ಲಿ ವಾಸವಾಗಿದ್ದ ಕನ್ನಡಿಗರಿಗೆ ಗುಡಿಯಲುಗಳನ್ನು ತೆರವುಗೊಳಿಸುವಂತೆ  ಗೋವಾ ಸರ್ಕಾರ ಈ ಮೊದಲೇ ನೋಟಿಸ್ ಜಾರಿಗೊಳಿಸಿತ್ತು. 
 
ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಲ್ಲದೇ ಈ ಕುಟುಂಬಗಳು ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಈ ಮನೆಗಳಿರುವ ಸ್ಥಳ ಅಸುರಕ್ಷಿತವಾಗಿದ್ದು, ಪಾಕೃತಿಕ ವಿಕೋಪಗಳಿಗೆ ತುತ್ತಾಗುವ ಸಂಭವವಿದೆ .ಈ ಕಾರಣಕ್ಕಾಗಿ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗೋವಾ ಸರ್ಕಾರ ತನ್ನ ಕೃತ್ಯಕ್ಕೆ ಸಮಜಾಯಿಸಿ ನೀಡುತ್ತಿದೆ. 

Share this Story:

Follow Webdunia kannada