ಜವರಾಯನಾಗಿ ಬಂದ ಲಾರಿ: 12 ಸಾವು

Webdunia
ಮಂಗಳವಾರ, 26 ಏಪ್ರಿಲ್ 2016 (08:44 IST)
ಕೊಪ್ಪಳದಲ್ಲಿ ಸೋಮವಾರ ಸಂಜೆ ಭೀಕರ ಅಪಘಾತ ನಡೆದಿದ್ದು 12 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲಗೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿದ್ದು ಟಂಟಂ ವಾಹನದಲ್ಲಿದ್ದ 12 ಜನರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. 
 
ಟಂಟಂನಲ್ಲಿ ಒಟ್ಟು 16 ಜನರಿದ್ದರು. ಮೃತರನ್ನು ಅನ್ನಪೂರ್ಣಮ್ಮ, ಮಿರಾಜಾನಾಬಿ, ನಿರಂಜನಿ, ಶಿವಮೂರ್ತಿ, ವೀರಪ್ಪ, ಗಂಗಮ್ಮ , ನಾಗವೇಣಿ , ಕುಸುಮ, ಆಶಾ, ಬೀಬಿಜಾನ್, ಲಕ್ಷ್ಮಿ, ಸರೋಜಾ ಎಂದು ಗುರುತಿಸಲಾಗಿದ್ದು ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಕೋಳಿಪೇಟೆ ಹಾಗೂ ನೇಕಾರ ನಗರದ ನಿವಾಸಿಗಳೆಂದು ಹೇಳಲಾಗುತ್ತಿದೆ. 
 
ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಟಂಟಂ ವಾಹನದಲ್ಲಿದ್ದವರು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು, ಕೊಪ್ಪಳ ನಗರದಲ್ಲಿ ನಡೆದ ಮದುವೆಯೊಂದಕ್ಕೆ ಆಗಮಿಸಿದ್ದರು. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡ್‌ನೈಟ್ ಹಂಚಿಕೊಂಡ ವಿಡಿಯೋಗೆ ಸಿಕ್ಕಾ ಪ್ರತಿಕ್ರಿಯೆಗೆ ಪ್ರಧಾನಿ ಮೋದಿ ಥ್ಯಾಂಕ್ಸ್‌

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು, ತಿಳಿದುಕೊಳ್ಳಬೇಕಾದ ಅಂಶ ಇಲ್ಲಿದೆ

NEET ಪ್ರಶ್ನೆಪತ್ರಿಕೆ ವಿವಾದ: 47ಅಧಿಕಾರಿಗಳ ವಜಾ, ಮಹತ್ವದ ಬೆಳವಣಿಗೆ

ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲು ನಿಜ ಕಾರಣವೇನು: ಶಾಕಿಂಗ್ ವಿಡಿಯೋ ಬಿಡುಗಡೆ ಮಾಡಿದ ದೆಹಲಿ ಪೊಲೀಸರು

ಟಾಟಾ ಸುಮೋ ಮೇಲೆ ಬಿದ್ದ ಬೃಹತ್ ಬಂಡೆಗಳು, 13ಮಂದಿ ಸಾವು

Show comments