Webdunia - Bharat's app for daily news and videos

Install App

ನಾವಿಬ್ಬರು ಜೊತೆಯಾಗಿಯೇ ಇರುತ್ತೇವೆ ಎಂದ ಹೋಮೊ ಗರ್ಲ್ಸ್‌‌‌

Webdunia
ಶುಕ್ರವಾರ, 22 ಆಗಸ್ಟ್ 2014 (18:16 IST)
ಮಸೂರಿ ಠಾಣಾ ವ್ಯಾಪ್ತಿಯಲ್ಲಿರುವ ಒಂದು ಗ್ರಾಮದಲ್ಲಿ ಬಾಲಕಿಯರಿಬ್ಬರು ಮೂರು ತಿಂಗಳಿನಿಂದ ಪತಿ-ಪತ್ನಿಯರಂತೆ ವಾಸವಾಗಿದ್ದಾರೆ. ಅವರಲ್ಲಿ ಒಬ್ಬಳು ಪ್ರಾಪ್ತ ವಯಸ್ಕಳಾಗಿದ್ದರೆ ಮತ್ತೊಬ್ಬಳು ಅಪ್ರಾಪ್ತ ಬಾಲಕಿಯಾಗಿದ್ದಾಳೆ.ಇದ್ದರು ಜೊತೆಯಲ್ಲಿ ಸತ್ತರೂ ಜೊತೆಯಲ್ಲಿ ಎನ್ನುವ ಪ್ರತಿಜ್ಞೆ ತೆಗೆದುಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ .
 
ಅಪ್ರಾಪ್ತ ಬಾಲಕಿಯ ಕುಟುಂಬದವರು, ತಮ್ಮ ಪುತ್ರಿಯನ್ನು  ಪುಸಲಾಯಿಸಿ ಯುವತಿ ಮತ್ತು ಆಕೆಯ ಸಹೋದರಿಯರು ಅಪಹರಿಸಿದ್ದಾರೆ ಎಂಬ ಆರೋಪ ಹೊರಿಸಿ ಮಸೂರಿ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಲಿಸರು, ಆರೋಪಿ ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕಿ ಕೂಡ ಠಾಣೆಯಲ್ಲಿ ಇದ್ದಾಳೆ, ಇವರನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೋಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ. 
 
ಬಾಗಪತ್‌‌‌ನ ಒಂದು ಗ್ರಾಮದ ಯುವತಿ(19) ಹಲವು ತಿಂಗಳಿಗಳಿಂದ ತಮ್ಮ ಕುಟುಂಬದವರಿಂದ ಬೇರೆಯಾಗಿ ಏಕಾಂಗಿಯಾಗಿ ಮಸೂರಿಯ ಈ ಗ್ರಾಮದಲ್ಲಿ ವಾಸವಾಗಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 
 
12ನೇ ತರಗತಿಯವರೆಗೆ ಓದಿದ ಯುವತಿ, ತನ್ನ ನೆರೆಯಲ್ಲಿರುವ 15 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳಸಿದ್ದಾಳೆ. ಪತಿ-ಪತ್ನಿಯಂತೆ ವಾಸಿಸುತ್ತಿದ್ದ ಇಬ್ಬರಿಗೆ ಗ್ರಾಮಸ್ಥರು ತಿಳಿಹೇಳಿದರು ಯಾವುದೇ ಪ್ರಯೋಜನವಾಗದಿದ್ದರಿಂದ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  
 
ಪೋಲಿಸರು ಯುವತಿ ಮತ್ತು ಬಾಲಕಿಯನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಿದರು ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ, ಅಪ್ರಾಪ್ತ ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments