Select Your Language

Notifications

webdunia
webdunia
webdunia
webdunia

ಮೋದಿ ಸರಕಾರ ದಾವುದ್‌ನನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ: ರಾಜನಾಥ್ ಸಿಂಗ್

ಮೋದಿ ಸರಕಾರ ದಾವುದ್‌ನನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ: ರಾಜನಾಥ್ ಸಿಂಗ್
ದಾವೂದ್ , ಮಂಗಳವಾರ, 12 ಆಗಸ್ಟ್ 2014 (18:45 IST)
ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ತನ್ನ ಜೀವನದ ಕೆಟ್ಟ ಗಳಿಗೆಯನ್ನು ಶೀಘ್ರವೇ ಎದುರಿಸಲಿದ್ದಾನೆ ಎಂಬಂತೆ ಭಾಸವಾಗುತ್ತಿದ್ದು,  ಕೇವಲ ಎರಡು ತಿಂಗಳ ಒಳಗೆ ಆತನನ್ನು ಬಂಧಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ  ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಆತನನ್ನು ಸೆರೆಹಿಡಿಯಲು ನಮ್ಮಿಂದ ಸಾಧ್ಯವಿರುವ ಎಲ್ಲ ಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಕೇಂದ್ರ ಗೃಹ ಮಂತ್ರಿ ತಿಳಿಸಿದ್ದಾರೆ. 
 
 ಗೃಹ ಖಾತೆಗೆ ಸಂಬಂಧಿಸಿದ ವಿಷಯದ ಕುರಿತ ಚರ್ಚೆಯಲ್ಲಿ ನಾವು ದಾವುದ್ ಬಂಧನಕ್ಕೆ ಪ್ರಯತ್ನಿಸುತ್ತಿದ್ದೇವೆ. ಅವನು ಎಲ್ಲೇ ಅಡಗಿದ್ದರೂ ನಾವವನನ್ನು ಬಂಧಿಸಿಯೇ ತೀರುತ್ತೇವೆ. ಅಪರಾಧಿಗಳನ್ನು ನ್ಯಾಯಾಂಗದ ವಶಕ್ಕೆ ತರಲೇ ಬೇಕು.  ಅದು ಹಿಂದಿನ ಸರಕಾರದ ಪ್ರಯತ್ನವಾಗಿತ್ತು ಮತ್ತು  ನಮ್ಮ ಸರಕಾರವು ಕೂಡ ಅದೇ ಪ್ರಯತ್ನದಲ್ಲಿದೆ .
 
1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಮುಖ್ಯ ರೂವಾರಿಯಾದ ದಾವೂದ್ 300 ಜನರ ಸಾವಿಗೆ ಕಾರಣನಾಗಿದ್ದಾನೆ.  ಆತ ದೇಶದಲ್ಲಿನ ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಕೂಡ ಶಾಮೀಲಾಗಿರುವ ಶಂಕೆ ಇದ್ದು  ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪೈಕಿ ಅಗ್ರಸ್ಥಾನದಲ್ಲಿದ್ದಾನೆ. 

Share this Story:

Follow Webdunia kannada