Webdunia - Bharat's app for daily news and videos

Install App

ಹಿಟ್ ಅಂಡ್ ರನ್ ಪ್ರಕರಣ: ನ್ಯಾಯಾಲಯದಲ್ಲಿ ಹೇಳಿಕೆ ನೀಡಲಿರುವ ಸಲ್ಮಾನ್

Webdunia
ಶುಕ್ರವಾರ, 27 ಮಾರ್ಚ್ 2015 (13:09 IST)
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಅವರು ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಇಂದು ಆಗಮಿಸಲಿದ್ದು, ಪ್ರಕರಣದ ನಿಜಾಂಶದ ಹೇಳಿಕೆಗಳನ್ನು ದಾಖಲಿಸಲಿದ್ದಾರೆ. 
 
ಪ್ರಕರಣದ ಹಿನ್ನೆಲೆ: ನಟ ಸಲ್ಮಾನ್, ನಗರದ ಬಾಂದ್ರಾ ಪ್ರಾಂತ್ಯದಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿದ್ದ ಸಲ್ಮಾನ್, ತಮ್ಮ ಕಾರನ್ನು ಫೂಟ್‌ಪಾತ್ ಮೇಲೆ ಹಾಯಿಸಿದ್ದರು. ಪರಿಣಾಮ ಕಾರು ಮಲಗಿದ್ದವರ ಮೇಲೆ ಹರಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಅಲ್ಲದೆ  ನಾಲ್ವರು ಗಾಯಗೊಂಡಿದ್ದರು. 
 
ಈ ಸಂಬಂಧ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಅಲ್ಲದೆ ಕಳೆದ ಹಲವು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಅಪಘಾತಕ್ಕೆ ಸಲ್ಮಾನ್ ಅವರೇ ಕಾರಣರಾಗಿದ್ದು, ಅವರೇ ಕಾರನ್ನು ಚಲಾಯಿಸುತ್ತಿದ್ದರು. ಅಲ್ಲದೆ ಘಟನೆ ನಡೆಯುವುದಕ್ಕೂ ಮುನ್ನ ಅವರ ಬಳಿ ವಾಹನ ಚಾಲನಾ ಪರವಾನಿಗೆ ಇರಲಿಲ್ಲ ಎಂದು ಪ್ರತಿವಾದಿಗಳು ಆರೋಪಿಸಿದ್ದಾರೆ. 
 
ಇನ್ನು ಈಗಾಗಲೇ ತನಿಖೆ ವೇಳೆ ಹೇಳಿಕೆ ನೀಡಿದ್ದ ಸಲ್ಮಾನ್, ಕಾರು ನನ್ನದೇ ಆದರೂ ಕಾರನ್ನು ನಾನು ಚಲಾಯಿಸುತ್ತಿರಲಿಲ್ಲ ಎನ್ನುವ ಮೂಲಕ ಪ್ರತಿವಾದಿಗಳ ಸಾಕ್ಷ್ಯ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಆದರೆ ಘಟನೆ ನಡೆದ ಬಳಿಕವೇ ಸಲ್ಮಾನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ವರದಿ ನೀಡಿದ್ದು, ಅವರ ದೇಹದಲ್ಲಿ ಹಾಲ್ಕೋಹಾಲಿನ ಶೇ. 60ರಷ್ಟು ಅಂಶ ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಿದ್ದರು. 
 
ಇಂದು ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಸಲ್ಮಾನ್, ತಮ್ಮ ನಿರ್ಧಾರದ, ನಿಜಾಂಶದ ಹೇಳಿಕೆಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ದಾಖಲಿಸಿದ್ದಾರೆ. ಒಂದು ವೇಳೆ ಪ್ರಕರಣದಲ್ಲಿ ಸಲ್ಮಾನ್ ಆರೋಪಿ ಎಂದು ಸಾಬೀತಾದಲ್ಲಿ ಕನಿಷ್ಟ 10 ವರ್ಷಗಳ ಶಿಕ್ಷೆ ಆಗುವುದಂತೂ ಕಡ್ಡಾಯ ಎಂಬುದಾಗಿ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.   
 
ಈ ಘಟನೆಯು 2002ರ ಸೆ.28ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆದಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments