Select Your Language

Notifications

webdunia
webdunia
webdunia
webdunia

ಹಿಟ್ ಅಂಡ್ ರನ್ ಪ್ರಕರಣ: ದೋಷಿ ಎಂದು ಸಾಬೀತಾದರೂ ನಗುತಲಿರುವ ಸಲ್ಮಾನ್

ಹಿಟ್ ಅಂಡ್ ರನ್ ಪ್ರಕರಣ: ದೋಷಿ ಎಂದು ಸಾಬೀತಾದರೂ ನಗುತಲಿರುವ ಸಲ್ಮಾನ್
ಮುಂಬೈ , ಬುಧವಾರ, 6 ಮೇ 2015 (12:58 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣದ ತೀರ್ಪು ಇಂದು ಪ್ರಕಟವಾಗುತ್ತಿದ್ದು, ಸಲ್ಮಾನ್ ದೋಷಿ ಎಂದು ಸಾಬೀತಾಗಿದೆ. ಆದರೂ ಕೂಡ ಆರೋಪಿ ಸಲ್ಮಾನ್, ಕೋರ್ಟ್‌ನ ಹೊರಾಂಗಣದಲ್ಲಿ ತಮ್ಮ ಸಹೋದರಿಯೊಂದಿಗೆ ನಗು ನಗುತ್ತಲೇ ಮಾತನಾಡುತ್ತಿರುವುದು ಕಂಡು ಬಂದಿದೆ.  
 
ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಇಂದು ಬೆಳಗ್ಗೆ ಸಲ್ಮಾನ್ ಅವರ ಅಭಿಪ್ರಾಯವನ್ನು ಪ್ರಶ್ನಿಸಿದ್ದರು. ಈ ವೇಳೆ ಮೌನ ವಹಿಸಿದ್ದ ಸಲ್ಮಾನ್, ಉತ್ತರಿಸದೆ ಕಣ್ಣೀರಿಟ್ಟಿದ್ದರು. ಈ ಬೆನ್ನಲ್ಲೇ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೋರ್ಟ್ ಹೊರಾಂಗಣದಲ್ಲಿರುವ ಸಲ್ಮಾನ್ ತಮ್ಮ ಸಹೋದರಿಯೊಂದಿಗೆ ಮಾತುಕತೆ ನಡೆಸುತ್ತಿದ್ದು, ನಗು ನಗುತ್ತಲೇ ಮಾತನಾಡುತ್ತಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ವಾದ ವಿವಾದಗಳು ಮುಗಿದಿದ್ದು, ಇಂದು ಮಧ್ಯಾಹ್ನ 1.10ಕ್ಕೆ ತೀರ್ಪು ಪ್ರಕಟವಾಗಲಿದೆ. 

Share this Story:

Follow Webdunia kannada