Select Your Language

Notifications

webdunia
webdunia
webdunia
webdunia

ಹಿಟ್ ಅಂಡ್ ರನ್ ಪ್ರಕರಣ: ಸಲ್ಮಾನ್ ದೋಷಿ ಎಂದ ನ್ಯಾಯಾಲಯ

ಹಿಟ್ ಅಂಡ್ ರನ್ ಪ್ರಕರಣ: ಸಲ್ಮಾನ್ ದೋಷಿ ಎಂದ ನ್ಯಾಯಾಲಯ
ಮುಂಬೈ , ಬುಧವಾರ, 6 ಮೇ 2015 (11:42 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧ ಇದ್ದ ಹಿಟ್ ಅಂಡ್ ರನ್ ಪ್ರಕರಣದ ತೀರ್ಪು ಇಂದು ಪ್ರಕಟವಾಗುತ್ತಿದ್ದು, ಖಾನ್ ಪ್ರಕರಣದಲ್ಲಿ ದೋಷಿಯಾಗಿದ್ದಾರೆ ಎಂದು ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈಗಾಗಲೇ ಘೋಷಿಸಿದೆ.  
 
ನ್ಯಾಯಾಲಯದ ನ್ಯಾಯಾಮೂರ್ತಿ ದೇಶಪಾಂಡೆ ಅವರಿರುವ ಪೀಠ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಮೊದಲ ಹಂತವಾಗಿ ದೋಷಿ ಎಂಬುದಾಗಿ ಸಾಬೀತಾಗಿದೆ ಎಂದು ಘೋಷಿಸಿದೆ. 
 
ವಿಚಾರಣೆ ವೇಳೆ ನ್ಯಾಯಾಧೀಶರು ಶಿಕ್ಷೆ ಪ್ರಮಾಣದ ಬಗ್ಗೆ ತಮ್ಮ ಅನಿಸಿಕೆ ಏನು, ಏಕೆಂದರೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಪ್ರಕಟಿಸುವ ನಿಯಮವಿದೆ ಎಂದು ಸಲ್ಮಾನ್ ಅವರನ್ನೇ ಪ್ರಶ್ನಿಸಿದ್ದು, ಅದಕ್ಕೆ ಖಾನ್ ಮೌನ ವಹಿಸಿದ್ದರು ಎಂದು ತಿಳಿದು ಬಂದಿದೆ.  
 
ಪ್ರಕರಣದಲ್ಲಿ ಖಾನ್ ಅವರ ಮೇಲಿದ್ದ ಆರೋಪಗಳೇನು?
ವಿಚಾರಣೆ ಅವಧಿಯಲ್ಲಿ ಕುಡಿದು ಕಾರು ಚಾಲನೆ ಮಾಡಿದ್ದಾರೆ ಎಂಬ ಆರೋಪವಿತ್ತು. ಪ್ರಸ್ತುತ ಇದು ವಿಚಾರಣೆಯಲ್ಲಿ ದೃಢಪಟ್ಟಿದ್ದು, ಅಪಘಾತ ಸಂದರ್ಭದಲ್ಲಿ ಶೇ. 62 ಎಂಜಿ ಹಾಲ್ಕೋಹಾಲ್ ಕಂಟೆಂಟ್ ಅವರ ದೇಹದಲ್ಲಿತ್ತು ಎಂಬುದಾಗಿ ವೈದ್ಯಕೀಯ ವರದಿಯಿಂದ ತಿಳಿದು ಬಂದಿತ್ತು.
ಬೇಜವಾಬ್ದಾರಿಯಿಂದ ಕಾರು ಚಲಾಯಿಸುತ್ತಿದ್ದುದಲ್ಲದೆ ವೇಗದಿಂದ ಚಾಲನೆ ಮಾಡಲಾಗುತ್ತಿತ್ತು, ಅಲ್ಲದೆ ನನ್ನ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ, ನಾನು ಕಾರು ಚಲಾಯಿಸುತ್ತಿರಲಿಲ್ಲ ಎಂಬ ಸಲ್ಲು ಅವರ ವಿವಿಧ ಹೇಳಿಕೆಗಳೂ ಸಾಬೀತಾಗಿದೆ. 
 
ಭಾರತೀಯ ದಂಡ ಸಂಹಿತೆ 304/2ರ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಆದ್ದರಿಂದ ಈ ಪ್ರಕರಣವನ್ನು ಉದ್ದಶ ರಹಿತ ಮಾನವ ಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಕಾನೂನು ತಜ್ಞರ ಪ್ರಕಾರ 10 ವರ್ಷ ಜೈಲು ಶಿಕ್ಷೆ ಆಗುವ ಸಂಭವವಿದೆ ಎನ್ನಲಾಗುತ್ತಿದೆ.   
 
ಕುಡಿದು ಚಾಲನೆ ಮಾಡುವಾಗ ಪಾದಚಾರಿಗಳ ಮೇಲೆ ಹತ್ತಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದ ಪ್ರಕರಣ ಇದಾಗಿದ್ದು, ಇದು ಕಳೆದ 2002ರ ಸೆ. 27 ಮತ್ತು 28ರ ಮಧ್ಯರಾತ್ರಿಯಲ್ಲಿ ನಡೆದಿತ್ತು. ಸುಮಾರು 12 ವರ್ಷಗಳ ಸುಧೀರ್ಘ ವಿಚಾರಣೆಯ ಬಳಿಕ ಇಂದು ಅಂತಿಮ ತೀರ್ಪು ಪ್ರಕರವಾಗುತ್ತಿದ್ದು, ಸಂಜೆಯೊಳಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ಮುಂಬೈ ನಗರದ ಬಾಂದ್ರಾದಲ್ಲಿ ನಡೆದ ಪ್ರಕರಣ ಇದಾಗಿದೆ. 

Share this Story:

Follow Webdunia kannada