Webdunia - Bharat's app for daily news and videos

Install App

ಆಸ್ಸಾಂ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಬದ್ಧ: ಸೋನೋವಾಲ್

Webdunia
ಗುರುವಾರ, 19 ಮೇ 2016 (13:36 IST)
ಪಂಚ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಮೊದಲ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ್ ಸೋನೋವಾಲ್ ತಮ್ಮ ನೂತನ ಸರಕಾರದ ಆಧ್ಯತೆಗಳನ್ನು ಬಹಿರಂಗ ಪಡಿಸಿದ್ದಾರೆ.
 
ಭಾರತ ಮತ್ತು ಬಾಂಗ್ಲಾ ಗಡಿ ರಕ್ಷಣೆ
 
ಅಕ್ರಮ ಗಡಿ ಒಳನುಸುಳುವಿಕೆ ಸಮಸ್ಯೆ, ಇಂಡೋ-ಬಾಂಗ್ಲಾ ಗಡಿ ರಕ್ಷಣೆ, ಸಣ್ಣ ಪ್ರಮಾಣದ ಚಹಾ ಬೆಳೆಗಾರರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳು ಸರಕಾರಕ್ಕೆ ಪ್ರಮುಖ ಸವಾಲುಗಳಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲು ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸಲಿದೆ ಎಂದು ಸರ್ಬಾನಂದ್ ಸೋನೋವಾಲ್ ಸರಕಾರದ ಆಧ್ಯತೆಗಳನ್ನು ವಿವರಿಸಿದ್ದಾರೆ.
 
ಬಾಂಗ್ಲಾ ವಲಸಿಗರ ಸಮಸ್ಯೆ
 
ಬಾಂಗ್ಲಾ ಗಡಿ ದಾಟಿ ಅಕ್ರಮವಾಗಿ ಒಳನುಸುಳುವ ವಲಸಿಗರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾರತೀಯ ಜನತಾ ಪಾರ್ಟಿ ನೀಯಕ ಸೋನೋವಾಲ್, ಅಕ್ರಮ ಒಳನುಸುಳುವಿಕೆ ನಿಲ್ಲಿಸಲು ಗಡಿ ರಕ್ಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 
 
ಕೃತ್ರಿಮವಲ್ಲದ ಭಾರತೀಯ ನಾಗರಿಕರ ಪಟ್ಟಿ
 
ಕೃತ್ರಿಮವಲ್ಲದ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಹಿಂದೂ ಅಥವಾ ಮುಸ್ಲಿಂ ಕೃತ್ರಿಮವಲ್ಲದ ನಾಗರಿಕರ ಆಸಕ್ತಿ ರಕ್ಷಿಸುವುದು ನಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ. 
 
ರಾಜ್ಯದಲ್ಲಿ ಬಿಜಿಪಿ ಭರ್ಜರಿ ಗೆಲುವಿನ ಕುರಿತು ಮಾತನಾಡಿದ ಸೋನೋವಾಲ್, ಮತದಾರರು ಉತ್ತಮ ಆಡಳಿತ ಬಯಸಿ ಬಿಜಿಪಿಯನ್ನು ಬೆಂಬಲಿಸಿ, ಆಡಳಿತರೂಢ ಕಾಂಗ್ರೆಸ್‌ ಸರಕಾರವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತತ 8 ನೇ ಭಾರೀ ಸ್ಚಚ್ಚ ನಗರ ಹೆಗ್ಗಳಿಕೆಗೆ ಪಾತ್ರವಾದ ಇಂದೋರ್‌, ಮೂರನೇ ಸ್ಥಾನದಲ್ಲಿ ಮೈಸೂರು

ಮೆಟ್ರೊ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್‌: ಮೆಟ್ರೊ ಮಾರ್ಗಗಳಲ್ಲಿ ಸಿಗಲಿದೆ ವೈಫೈ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿ ಮನೆಗೆ ಉಚಿತ ವಿದ್ಯುತ್ ಘೋಷಿಸಿದ ಬಿಹಾರ ಸಿಎಂ ನಿತೀಶ್‌

ಭಾರೀ ಮಳೆಗೆ ದಕ್ಷಿಣ ಕನ್ನಡದ ಹಲವೆಡೆ ಭೂಕುಸಿತ: ಬೆಂಗಳೂರು–ಮಂಗಳೂರು ಹೆದ್ದಾರಿ ಸಂಪರ್ಕ ಕಡಿತ

ರಸ್ತೆ ನಿರ್ಮಿಸಲು ಮೋದಿಗೆ ಪತ್ರ ಬರೆದ ಬಾಲಕಿ: ಕಾಂಗ್ರೆಸ್ ಕೈಲಿ ಅದೂ ಆಗಲ್ವಾ ಎಂದು ಬಿಜೆಪಿ ಟೀಕೆ

ಮುಂದಿನ ಸುದ್ದಿ
Show comments