Webdunia - Bharat's app for daily news and videos

Install App

ಭಾರತದ 52ನೇ ಸಿಜೆಐ ಆಗಿ ನೇಮಕಗೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹಿನ್ನಲೆ ಇಲ್ಲಿದೆ

Sampriya
ಮಂಗಳವಾರ, 29 ಏಪ್ರಿಲ್ 2025 (21:37 IST)
Photo Courtesy X
ನವದೆಹಲಿ: ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್‌.ಗವಾಯಿ) ಅವರನ್ನು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗವಾಯಿ ಅವರ ನೇಮಕವನ್ನು ಅನುಮೋದಿಸಿದ್ದಾರೆ.

1960ರ ನವೆಂಬರ್‌ 24ರಂದು ಅಮರಾವತಿಯಲ್ಲಿ ಜನಿಸಿದ ಗವಾಯಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2003ರ ನವೆಂಬರ್‌ 14ರಂದು ಅಧಿಕಾರ ವಹಿಸಿಕೊಂಡರು. 2005ರ ನವೆಂಬರ್‌ 12ರಂದು ಅವರ ಸೇವೆಯು ಕಾಯಂ ಆಯಿತು.

ಭೂಷಣ್ ಗವಾಯಿ ಅವರು ಅವರ ತಂದೆ ದಿವಂಗತ ಆರ್.ಎಸ್. ಗವಾಯಿ ಅವರು ಬಿಹಾರ ಮತ್ತು ಕೇರಳದ ಮಾಜಿ ರಾಜ್ಯಪಾಲರು ಮತ್ತು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾಗಿದ್ದರು.

ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಮೇ 14 ರಂದು ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಭಾರತದ ಸಂವಿಧಾನವು ನೀಡಿರುವ ಅಧಿಕಾರದ ಅಡಿಯಲ್ಲಿ ಈ ನೇಮಕಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರಿಗೆ ಸಿಜೆಐ ಆಗಿ 6 ತಿಂಗಳಿಗೂ ಹೆಚ್ಚಿನ ಅವಧಿ ಸಿಗಲಿದ್ದು ಈ ವರ್ಷದ ನವೆಂಬರ್‌ 23ರಂದು ನಿವೃತ್ತರಾಗಲಿದ್ದಾರೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಲ್ಶಿಯಂ ಟ್ಯಾಬ್ಲೆಟ್ ಅತಿಯಾಗಿ ಸೇವಿಸುತ್ತಿದ್ದರೆ ಡಾ ಬಿಎಂ ಹೆಗ್ಡೆಯವರ ಸಲಹೆ ಕೇಳಿ

ಸತ್ತ ಆರ್ಥಿಕತೆ ಎಂದು ರಷ್ಯಾ, ಭಾರತಕ್ಕೆ ನಿಂದಿಸಿ ಈಗ ರಷ್ಯಾಕ್ಕೇ ಹೊರಟ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಹೀಗೇ ಮಾಡ್ತಿದ್ದರೆ ಭಾರತಕ್ಕೆ ಇದೊಂದೇ ದಾರಿ ಉಳಿಯೋದು

ಧರ್ಮಸ್ಥಳ ಗಲಾಟೆ: ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟೆಣ್ಣನವರ್, ಸಮೀರ್ ವಿರುದ್ಧ ಕೇಸ್

ಭಾರತಕ್ಕೆ ಟ್ರಂಪ್ ಸುಂಕ: ಮೋದಿ ಬೆಂಬಲಿಸಿದ್ದಕ್ಕೆ ಸರಿಯಾಗಿಯೇ ಮಾಡಿದ್ರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments