Webdunia - Bharat's app for daily news and videos

Install App

ಮದುವೆ ನಿರಾಕರಣೆ: ಯುವತಿಗೆ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಯುವಕ

Webdunia
ಸೋಮವಾರ, 29 ಆಗಸ್ಟ್ 2016 (13:39 IST)
ತನ್ನ ಮದುವೆ ಪ್ರಪೋಸಲ್ ನಿರಾಕರಿಸಿದ 25 ವರ್ಷದ ಯುವತಿಯ ಮೈಗೆ ಯುವಕನೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ವಾಯವ್ಯ ದೆಹಲಿಯ ಬಾಲ್ಸ್‌ವಾ ಡೇರಿ ಪ್ರದೇಶದಲ್ಲಿ ಸಂಭವಿಸಿದೆ. ಆರೋಪಿ ಅಭಿಷೇಕ್ ತನ್ನ ಸ್ನೇಹಿತರಾದ ವಿಜಯ್, ಕರಣ್ ಮತ್ತಿತರರ ಜತೆ ಸೇರಿಕೊಂಡು ಸಂತ್ರಸ್ತೆಯ ಮನೆಗೆ ತೆರಳಿ ಯುವತಿಯ ಬಂಧುಗಳನ್ನು ರಾಡ್‌ಗಳಿಂದ ಥಳಿಸಲಾರಂಭಿಸಿದರು.
 
ಅಭಿಶೇಕ್‌ನ ನಾಲ್ಕೈದು ಚಿಕ್ಕಪ್ಪಂದಿರು ಮತ್ತು ಸ್ನೇಹಿತರು ಜತೆಗೂಡಿದ್ದರು. ಯುವತಿಗೆ ಅಭಿಷೇಕ್‌ ಪುನಃ ಮದುವೆಯಾಗುವಂತೆ ಒತ್ತಾಯಿಸಿದ. ಆದರೆ ಯುವತಿ ನಿರಾಕರಿಸಿದ ಕೂಡಲೇ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಬಳಿಕ ಎಲ್ಲರೂ ಕಾಲುಕಿತ್ತರು ಎಂದು ಸಂತ್ರಸ್ತೆಯ ಬಂಧು ಗೀತಾ ಹೇಳಿದ್ದಾರೆ.
 
 ಗೀತಾ ನಡೆದ ವಿದ್ಯಮಾನವನ್ನು ವಿವರಿಸುತ್ತಾ, ಯುವತಿ ಹೊರಗೆ ಹೋದಲ್ಲೆಲ್ಲ ಅಭಿಷೇಕ್ ಮತ್ತಿತರ ಯುವಕರು ಅವಳಿಗೆ ಕಿರುಕುಳ ನೀಡಲಾರಂಭಿಸಿದ್ದರು. ಅಭಿಷೇಕ ಯುವತಿಗೆ ಬೆದರಿಕೆ ಹಾಕುತ್ತಾ, ಅವಳು ತನ್ನನ್ನು ಮದುವೆಯಾಗದಿದ್ದರೆ ಬೇರೊಬ್ಬರ ಸ್ವತ್ತಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದ. ಕಳೆದ ಏಳೆಂಟು ದಿನಗಳಿಂದ ಕಿರುಕುಳ ನೀಡುತ್ತಿದ್ದರಿಂದ ಸಹಿಸದ ಯುವತಿ ಸೋದರನಿಗೆ ವಿಷಯ ಮುಟ್ಟಿಸಿದ್ದರಿಂದ ಸೋದರ ಯುವತಿಯಿಂದ ದೂರಉಳಿಯುವಂತೆ ಯುವಕರಿಗೆ ಎಚ್ಚರಿಸಿದ್ದರು.

ಕೆಲವು ದಿನಗಳ ನಂತರ ಮತ್ತೆ ಕಿರುಕುಳ ಷುರುವಾಯಿತು ಎಂದು ವಿವರಿಸಿದ್ದಾಳೆ. ಯುವತಿಯ ಮೈಗೆ ಬೆಂಕಿಹಚ್ಚಿದ್ದರಿಂದ ಅವಳ ದೇಹ ಶೇ. 95ರಷ್ಟು ಸುಟ್ಟಿದ್ದು ಬದುಕುಳಿಯುವ ಆಸೆ ನಶಿಸಿದೆ ಎಂದು ಗೀತಾ ಹೇಳಿದರು.
 
 ಈಗ ಸೋದರ ಮತ್ತು ಸೋದರಿ ಇಬ್ಬರೂ ತೀವ್ರ ನೋವನ್ನು ಅನುಭವಿಸಿದ್ದಾರೆ. ಆರೋಪಿಗಳು  ಕೂಡ ಮುಂದೆಂದೂ ಇಂತಹ ಕೃತ್ಯವೆಸಗದಂತೆ  ಶಿಕ್ಷೆ ವಿಧಿಸಬೇಕು ಎಂದು ಗೀತಾ ಮನವಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments