Webdunia - Bharat's app for daily news and videos

Install App

ಬಿಸಿಲಿನ ರೌದ್ರ ನರ್ತನಕ್ಕೆ 700ಕ್ಕೂ ಹೆಚ್ಚು ಬಲಿ

Webdunia
ಮಂಗಳವಾರ, 26 ಮೇ 2015 (09:17 IST)
ಆಂಧ್ರ ಪದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ಪ್ರಾಣ ತೆತ್ತವರ ಸಂಖ್ಯೆ 700 ಗಡಿ ದಾಟಿದೆ. ಇನ್ನೂ 2 ದಿನ  ಬಿಸಲಿನ ರೌದ್ರ ನರ್ತನ ಮುಂದುವರೆಯಲಿದೆ ಎಂದು ಆಂಧ್ರಪ್ರದೇಶದ ಮಹಾಮಾನ ಇಲಾಖೆ ತಿಳಿಸಿದೆ.

ಎರಡು ರಾಜ್ಯಗಳಲ್ಲಿ ಸತ್ತವರ ಸಂಖ್ಯೆ 725ಕ್ಕೆ ಏರಿದೆ. ಉಭಯ ರಾಜ್ಯಗಳಲ್ಲಿನ ತಾಪಮಾನವು 47 ಡಿಗ್ರಿ ಸೆಲ್ಸಿಯಸ್‌ಗೆ ಮುಟ್ಟಿದೆ. ಆಂಧ್ರಪ್ರದೇಶದಲ್ಲಿ ಬಿಸಿಲ ಹೊಡೆತಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.
 
ಇದೇ ಪ್ರಥಮ ಬಾರಿಗೆ ಹಮಾಮಾನ ಇಲಾಖೆ ಬಿಸಿಲಿನ ಝಳಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಮುಂಜಾನೆ ಬಿಸಿಲೇರಿದಾಗಿನಿಂದ ಸಂಜೆ 4 ಗಂಟೆಯವರೆಗೆ ಮನೆಯಿಂದ ಹೊರಗೆ ಬರದಿರಿ. ಅಂತಹ ಅಗತ್ಯ ಕಂಡುಬಂದರೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹೊರಬರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.
 
ದುರ್ಮರಣವನ್ನಪ್ಪಿದವರಿಗೆ ಆಂಧ್ರ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. 
 
ತೆಲಂಗಾಣದ ವಿವಿಧೆಡೆ ವಾಹನಗಳು ಬೆಂಕಿಗೆ ಆಹುತಿಯಾಗಿರುವ ವರದಿಯಾಗಿದೆ. ಬಿಸಿಲ ತಾಪಕ್ಕೆ ಟ್ಯಾಂಕ್ ಹೊತ್ತಿ ಉರಿದು ವಾಹನಗಳು ಭಸ್ಮವಾಗಿವೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments