ಹೃದಯಸ್ತಂಭನ: ಗೋವಾದ ಎರಡು ಬಾರಿಯ ಮುಖ್ಯಮಂತ್ರಿ, ಹಾಲಿ ಸಚಿವ ರವಿ ನಾಯ್ಕ್ ನಿಧನ

Sampriya
ಬುಧವಾರ, 15 ಅಕ್ಟೋಬರ್ 2025 (14:08 IST)
Photo Credit X
ಪಣಜಿ: ಗೋವಾದ ಎರಡು ಬಾರಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಹಾಲಿ ಸಚಿವ ರವಿ ನಾಯ್ಕ್, ಬುಧವಾರ ಮಧ್ಯರಾತ್ರಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪಣಜಿಯಿಂದ 30 ಕಿ.ಮೀ. ದೂರದ ನಿವಾಸದಲ್ಲಿ ರವಿ ನಾಯ್ಕ್ ಅವರಿಗೆ ಹೃದಯಸ್ತಂಭನವಾಗಿತ್ತು. ಬಳಿಕ ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಿಧನರಾದರು.

ರವಿ ನಾಯ್ಕ್ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.1984ರಲ್ಲಿ ಮೊದಲ ಬಾರಿ ಗೋವಾ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆರು ಬಾರಿ ಪೊಂಡಾ ಮತ್ತು ಒಂದು ಬಾರಿ ಮಾರ್ಕೈಮ್ ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದರು. ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ, ಕಾಂಗ್ರೆಸ್, ಮತ್ತು ಬಿಜೆಪಿ ಪಕ್ಷಗಳನ್ನು ಪ್ರತಿನಿಧಿಸಿದ್ದರು.

ಪೊಂಡಾ ವಿಧಾನಸಬಾ ಕ್ಷೇತ್ರದಲ್ಲಿ 1999, 2002,2007, 2017ರಲ್ಲಿ ಕಾಂಗ್ರೆಸ್ ಟಿಕೆಟ್‌ ಮತ್ತು 2022ರಲ್ಲಿ ಬಿಜೆಪಿ ಟಿಕೆಟ್‌ನಿಂದ ಗೆಲುವು ದಾಖಲಿಸಿದ್ದರು. 1991ರಿಂದ 1993 ಮತ್ತು 1994ರಲ್ಲಿ ಆರು ದಿನಗಳ ವರೆಗೆ (ಏ.2ರಿಂದ 8) ಗೋವಾ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಉತ್ತರ ಗೋವಾದ ಸಂಸದರಾಗಿಯೂ ಆಯ್ಕೆಯಾಗಿದ್ದರು. 

ರವಿ ನಾಯ್ಕ್ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. 'ರವಿ ನಾಯ್ಕ್ ಅವರ ನಾಯಕತ್ವ, ವಿನಯತೆ ಹಾಗೂ ಸಾರ್ವಜನಿಕ ಕಲ್ಯಾಣಕ್ಕೆ ನೀಡಿದ ಕೊಡುಗೆ ಗಮನಾರ್ಹ' ಎಂದು ಉಲ್ಲೇಖಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments