ಮಹಾರಾಷ್ಟ್ರದಲ್ಲಿ ಆದರ್ಶ ಹಗರಣಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ಇದೀಗ ಅನಧಿಕೃತವಾಗಿ ನಿರ್ಮಿಸಲಾದ ಆದರ್ಶ ಅಪಾರ್ಟ್‌ಮೆಂಟ್ ಕಟ್ಟಡವನ್ನು ಕೆಡುವಿ ಹಾಕುವಂತೆ ಮುಂಬೈ ಹೈಕೋರ್ಟ್ ಆದೇಶ ನೀಡಿದೆ.
ದಕ್ಷಿಣ ಮುಂಬೈನ ಕೊಲಬಾ ಪ್ರದೇಶದಲ್ಲಿರುವ ಕಟ್ಟಡವನ್ನು ಕೆಡುವಿ ಹಾಕಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪರಿಸರ ಮತ್ತು ಅರಣ್ಯ ಇಲಾಖೆಗೆ ಆದೇಶ ನೀಡಿದೆ.
ಮಹಾರಾಷ್ಟ್ರ ಸರಕಾರದ ವಿರೋಧದ ಹೊರತಾಗಿಯೂ ಆರೋಪಿಗಳಿಗೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 12 ವಾರಗಳ ಕಾಲವಕಾಶ ನೀಡಿದೆ. ಪ್ರಕರಣದಲ್ಲಿ ಭಾಗಿಯಾದವರ ವೆಚ್ಚದಲ್ಲಿಯೇ ಕಟ್ಟಡವನ್ನು ಕೆಡುವ ತಕ್ಕದು ಎಂದು ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳು ಆದರ್ಶ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳು ಸಚಿವರು ಮತ್ತು ರಾಜಕಾರಣಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಆರ್.ವಿ.ಮೋರೆ ಮತ್ತು ಆರ್.ಜಿ ಕೇಟ್ಕರ್ ನೇತೃತ್ವದ ನ್ಯಾಯಪೀಠ ಆದರ್ಶ ಸೂಸೈಟಿ ದಾಖಲಿಸಿದ ಅರ್ಜಿಯನ್ನು ತಳ್ಳಿಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.