Select Your Language

Notifications

webdunia
webdunia
webdunia
webdunia

ಯೋಧನ ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ಹರಿಯಾಣ ಸಿಎಂ

ಯೋಧನ ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ಹರಿಯಾಣ ಸಿಎಂ
ಕುರುಕ್ಷೇತ್ರ , ಭಾನುವಾರ, 30 ಅಕ್ಟೋಬರ್ 2016 (17:38 IST)
ಕುರುಕ್ಷೇತ್ರ: ಪಾಕಿ ಸೈನಿಕರ ಗುಂಡಿನ ದಾಳಿಗೆ ಸಿಕ್ಕಿ ಹುತಾತ್ಮರಾದ ಯೋಧ ಮಂದೀಪ್ ಸಿಂಗ್ ಅವರ ಅಂತಿಮ ಸಂಸ್ಕಾರ ಸ್ವಗ್ರಾಮವಾದ ಹರಿಯಾಣದ ಕುರುಕ್ಷೇತ್ರದಲ್ಲಿ ಇಂದು ಮುಂಜಾನೆ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.

 
ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಸಾವಿರಾರು ಜನರು ಆಗಮಿಸಿದ್ದರು. ಸಂಪೂರ್ಣ ಕುರುಕ್ಷೇತ್ರವೇ ಸ್ಮಶಾನ ಮೌನಕ್ಕೆ ಶರಣಾಗಿತ್ತು. ಅಂತಿಮ ದರ್ಶನಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ಕಣ್ಣಾಲಿಗಳು ತೇವಗೊಂಡಿದ್ದವು. ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವಾಗ ಸಿಎಂ ಮನೋಹರ್ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಮಗನ ಕಳೆದುಕೊಂಡ ನೋವು ಯಾರೊಬ್ಬರಿಗೂ ಬರದಿರಲಿ. ಆ ನೋವು ಸಹಿಸಲಸಾಧ್ಯವಾದದ್ದು. ಭಗವಂತ ಆ ನೋವನ್ನು ಭರಿಸುವ ಶಕ್ತಿ ನೀಡಲೆಂದಷ್ಟೇ ಪ್ರಾರ್ಥಿಸಬಹುದು ಎಂದರು. ಅಲ್ಲದೆ, ಹುತಾತ್ಮ ಯೋಧನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಭರವಸೆ ನೀಡಿದರು. 
 
ದೀಪಾವಳಿ ಸಂದರ್ಭದಲ್ಲಿ ಯೋಧ ಹುತಾತ್ಮನಾಗಿದ್ದು, ಸಂಪೂರ್ಣ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ದುಃಖದಲ್ಲಿರುವ ಈ ಸಂದರ್ಭದಲ್ಲಿ ಗ್ರಾಮಸ್ಥರು ದೀಪಾವಳಿ ಹಬ್ಬ ಆಚರಿಸ ಬಾರದೆಂದು ನಿರ್ಧರಿಸಿ, ಯೋಧನ ಆತ್ಮಕ್ಕೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿಯನ್ನು ನಮ್ಮನ್ನು ಕಾಯುವ ಯೋಧರಿಗೆ ಅರ್ಪಿಸೋಣ: ಮೋದಿ