Webdunia - Bharat's app for daily news and videos

Install App

ಪಿ.ವಿ.ಸಿಂಧು ಹೆಸರನ್ನೇ ಮರೆತ ಹರಿಯಾಣ ಮುಖ್ಯಮಂತ್ರಿ

Webdunia
ಗುರುವಾರ, 25 ಆಗಸ್ಟ್ 2016 (15:38 IST)
ಓಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹರಿಯಾಣದ ಕ್ರೀಡಾಪಟು ಸಾಕ್ಷಿ ಮಲ್ಲಿಕ್‌ಗೆ ತವರು ರಾಜ್ಯ ಸರ್ಕಾರ ನಿನ್ನೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 
 
ಕಾರ್ಯಕ್ರಮದ ನಡುವೆ ಅವರು ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದ ಪಿ.ವಿ.ಸಿಂಧುವನ್ನು ಸಹ ಅಭಿನಂದಿಸಿದರು. ದುರದೃಷ್ಟವಶಾತ್ ಬ್ಯಾಡ್ಮಿಂಟನ್ ಆಟಗಾರ್ತಿಯ ಹೆಸರನ್ನೇ ಮರೆತ ಅವರು ಆಕೆ ಕರ್ನಾಟಕದ ವಾಸಿ ಎಂದು ಹೇಳುವ ಮೂಲಕ ಮತ್ತೊಂದು ಅಧ್ವಾನವನ್ನು ಮಾಡಿದರು.
 
ರಕ್ಷಾಬಂಧನದ ದಿನ ನಮ್ಮಿಬ್ಬರು ಪುತ್ರಿಯರು ದೇಶದ ಹೆಸರನ್ನು ಎತ್ತರಕ್ಕೇರಿಸಿದರು. ಒಬ್ಬರು ಹರಿಯಾಣಾದ ಸಾಕ್ಷಿ ಮಲ್ಲಿಕ್, ಮತ್ತೊಬ್ಬರು ಕರ್ನಾಟಕದ ಸಿಂಧು (ಪಕ್ಕದಲ್ಲಿದ್ದವರ ಬಳಿ ಆಕೆಯ ಹೆಸರೇನು ಎಂದು ಕೇಳಿದರು)..ಪಿ.ವಿ.ಸಿಂಧು, ಅವರು ರಜತ ಪದಕ ಗೆದ್ದಿದ್ದಾರೆ (“Humare liye bohot hi garv ki baat hai ki raksha bandhan ke din humari do betiyon ne desh ka naam ucha kiya hai...Ek Haryana se Sakshi Malik aur dusri Karnataka se…Sindhu…(asks his team: kya naam hai)..PV Sindhu, jo rajat padak jeeti hai.. )ಎಂದು ಅವರು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿದೆ. 
 
ಮಲ್ಲಿಕ್ ಮತ್ತು ಆಕೆಯ ಕುಟುಂಬಕ್ಕೆ ಹಲವಾರು ಬಹುಮಾನಗಳನ್ನು ಘೋಷಿಸಿರುವುದರ ಜತೆಗೆ ಪಿ.ವಿ.ಸಿಂಧು ಅವರಿಗೂ ಸಹ ಬಿಜೆಪಿ ಸರ್ಕಾರ 50 ಲಕ್ಷ ಬಹುಮಾನವನ್ನು ಘೋಷಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments