Select Your Language

Notifications

webdunia
webdunia
webdunia
webdunia

ಹರಿಯಾಣ: ಸರಕಾರ ರಚಿಸುವತ್ತ ಬಿಜೆಪಿ

ಹರಿಯಾಣ: ಸರಕಾರ ರಚಿಸುವತ್ತ ಬಿಜೆಪಿ
ಚಂಡಿಗಢ , ಭಾನುವಾರ, 19 ಅಕ್ಟೋಬರ್ 2014 (12:18 IST)
ಹರಿಯಾಣದಲ್ಲಿ ಕಾಂಗ್ರೆಸ್‌ ದೂಳೀಪಟವಾಗಿದ್ದು ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನಡೆಯುತ್ತಿದೆ.
 
ಬಿಜೆಪಿ 46 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಮತ್ತು ಐಎನ್‌ಎಲ್‌ಡಿ ಪಕ್ಷಗಳು ಕ್ರಮವಾಗಿ 14 ಮತ್ತು 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
 
ಹರಿಯಾಣದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಐಎನ್‌ಎಲ್‌ಡಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. ಪ್ರಧಾನಿ ಮೋದಿ ಅವರ ಮ್ಯಾಜಿಕ್‌ ಮಂತ್ರ ಸಂಪೂರ್ಣವಾಗಿ ಕೆಲಸ ಮಾಡಿದ್ದು ಬಿಜೆಪಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ. ಇತರರು 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
 
ಆಡಳಿತರೂಢ ಕಾಂಗ್ರೆಸ್‌ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದೆ. ಇಲ್ಲಿ  ಕಾಂಗ್ರೆಸ್‌ ಕಳೆದೊಂದು ದಶಕದಿಂದ ಆಡಳಿತದಲ್ಲಿತ್ತು.

Share this Story:

Follow Webdunia kannada