Webdunia - Bharat's app for daily news and videos

Install App

ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಬಂದರೆ ದೇಶವ್ಯಾಪಿ ಪ್ರತಿಭಟನೆ: ಹಫೀಜ್ ಸಯೀದ್

Webdunia
ಮಂಗಳವಾರ, 2 ಆಗಸ್ಟ್ 2016 (15:57 IST)
ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನದಲ್ಲಿ  ಗೃಹ ಸಚಿವ ರಾಜನಾಥ್ ಸಿಂಗ್‌ ಅವರು ಪಾಲ್ಗೊಂಡರೆ ರಾಷ್ಟ್ಪವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಜಮಾತ್ ಉದ್–ದವಾ (ಜೆಯುಡಿ) ಸಂಘಟನೆ ಮುಖ್ಯಸ್ಥ , ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಪಾಕ್‌ ನವಾಜ್ ಶರೀಫ್ ಸರ್ಕಾರಕ್ಕೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದು ಪಾಕಿಸ್ತಾನಕ್ಕೆ ಸಿಂಗ್ ಭೇಟಿಯನ್ನು ತಡೆ ಹಿಡಿಯಬೇಕಾಗಿ ಆಗ್ರಹಿಸಿದ್ದಾನೆ.

ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ 7 ನೇ ಸಮ್ಮೇಳನ ಆಗಸ್ಟ್ 3 ಮತ್ತು 4 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದೆ.

ಲಾಹೋರಿನಲ್ಲಿರುವ ತನ್ನ ಮುಖ್ಯ ಕಾರ್ಯಾದಲಯದಲ್ಲಿ ಮಾತನ್ನಾಡುತ್ತಿದ್ದ ಹಫೀಜ್ , ಅಮಾಯಕ ಕಾಶ್ಮೀರಿಗಳ ಸಾವಿಗೆ ಕಾರಣರಾದ ರಾಜನಾಥ್ ಅವರನ್ನು ಸಮಾವೇಶಕ್ಕೆ ಸ್ವಾಗತಿಸುವ ಮೂಲಕ ಪಾಕಿಸ್ತಾನ ಸರ್ಕಾರ ಕಾಶ್ಮೀರ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಅವಮಾನ ಮಾಡುತ್ತಿದೆ.  ಸಿಂಗ್ ಅವರು ಇಸ್ಲಾಮಾಬಾದ್‌ಗೆ ಬಂದರೆ ಜೆಯುಡಿ ಕರಾಚಿ, ಪೇಶಾವರ, ಮುಲ್ತಾನ್‌, ಫೈಸಲಾಬಾದ್‌, ಮುಜಾಫರಾಬಾದ್ ಸೇರಿದಂತೆ ಇನ್ನಿತರ ನಗರಗಳಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾನೆ.

ಕಾಶ್ಮೀರಿಗಳಿಗೆ ಸಹಾಯ ಮಾಡಲು ಪಾಕಿಸ್ತಾನ ಸರ್ಕಾರಕ್ಕೆ  ಕಾಶ್ಮೀರಕ್ಕೆ ಭೇಟಿ ನೀಡಲು ಸಿಂಗ್ ಅನುಮತಿ ನೀಡಿದರೆ ಅವರಿಗೆ ಪಾಕಿಸ್ತಾನ ಪ್ರವೇಶಿಸಲು ಅವಕಾಶ ನೀಡುವ ಕುರಿತು ಶರೀಫ್ ಯೋಚಿಸಬಹುದು ಎಂದಾತ ಹೇಳಿದ್ದಾನೆ. ಅಷ್ಟೇ ಅಲ್ಲದೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವವರೆಗೆ ಭಾರತದೊಂದಿಗಿರುವ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದಾತ ಪಾಕ್ ಸರ್ಕಾರಕ್ಕೆ, ವ್ಯಾಪಾರಿಗಳಿಗೆ ಸಲಹೆ ನೀಡಿದ್ದಾನೆ.

ಪಠಾಣಕೋಟ್ ವಾಯುನೆಲೆ ಮೇಲಿನ ದಾಳಿಯ ಬಳಿಕ  ಸಂಪುಟ ದರ್ಜೆ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.  ಕಾಶ್ಮೀರ ಹಿಂಸಾಚಾರ ಕುರಿತಂತೆ  ಮೂಗು ತೂರಿಸಿದ್ದ ಪಾಕಿಸ್ತಾನಕ್ಕೆ ನಮ್ಮ ಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶಿಸದಂತೆ ಸಿಂಗ್ ತಕ್ಕ ಉತ್ತರ ನೀಡಿದ್ದರು.  ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿದ್ದ ಸಿಂಗ್,ಶ್ರೀನಗರದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಶಸ್ತ್ರಾಸ್ತಗಳನ್ನು ಕೈಗೆತ್ತಿಕೊಳ್ಳಲು ಯುವಕರನ್ನು  ಸರಿಯಲ್ಲ ಎಂಬುದನ್ನು ನೆರೆಯ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು ಎಂದು ಖಡಕ್ ಆಗಿ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments