ಭಾರತಕ್ಕೆ ಬುದ್ಧಿ ಕಲಿಸಲು ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸಿ: ಹಫೀಜ್

Webdunia
ಬುಧವಾರ, 17 ಆಗಸ್ಟ್ 2016 (17:58 IST)
ಮುಂಬೈ ದಾಳಿ ರೂವಾರಿ, ಜಮಾತ್  ಉಲ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್, ಭಾರತಕ್ಕೆ ಬುದ್ಧಿ ಕಲಿಸಲು ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಎಂದು ಪಾಕ್ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಬಳಿ ಕೇಳಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
 
'ಡಿಫೆನ್ಸ್ ಕೌನ್ಸಿಲ್ ಆಫ್ ಪಾಕಿಸ್ತಾನ' ಬ್ಯಾನರ್ ಅಡಿಯಲ್ಲಿ ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಆತ, ನಾವು ಪಾಕಿಸ್ತಾನದಲ್ಲಿಯೇ ಇರಲು ಬಯಸುತ್ತೇವೆ ಎಂದು ಪ್ರತ್ಯೇಕವಾಗುವುದಕ್ಕೆ ಮೊದಲೇ ಕಾಶ್ಮೀರಿಗಳು ಘೋಷಿಸಿದ್ದರು. ಆದರೆ ಇಬ್ಭಾಗವಾದ ನಂತರ ಭಾರತ ಒತ್ತಾಯ ಪೂರ್ವಕವಾಗಿ ಸೈನ್ಯವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿತು. ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಮೊದಮ್ಮದ್ ಅಲಿ ಜಿನ್ನಾ ಅವರು ಆಗಿನ ಕಮಾಂಡರ್- ಇನ್-ಚೀಪ್‌ಗೆ ಆದೇಶಿಸಿದ್ದರು. ಆದರೆ ಅವರ ಆದೇಶವನ್ನು ಪಾಲಿಸಲಾಗಲಿಲ್ಲ. ಈಗ ನಾನು ಜನರಲ್ ರಾಹೀಲ್ ಷರೀಫ್ ಅವರ ಬಳಿ ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾನೆ.
 
ನಾನು ಭಾರತದ ವಿರುದ್ಧ ಯುದ್ಧ ಮಾಡಲು ಹೇಳುವುದಿಲ್ಲ. ಆದರೆ  ಅವರು (ಪ್ರಧಾನಿ ನವಾಜ್ ಶರೀಫ್ ಮತ್ತು ರಾಹೀಲ್) ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರವನ್ನು ರೂಪಿಸಬೇಕು ಎಂದಿದ್ದಾನೆ ಆತ.
 
ನಿಮ್ಮ ಮೌನವನ್ನು ಮುರಿದು ಕಾಶ್ಮೀರ ಮತ್ತು ಬಲೂಚಿಸ್ತಾನದ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಎಂದಾತ ಪಾಕ್ ಪ್ರಧಾನಿಗೆ ಹೇಳಿದ್ದಾನೆ. 
 
ಪಾಕಿಸ್ತಾನ ಯುದ್ಧ ವಲಯವಾಗಿ ಬದಲಾಗಿದೆ. ಕಾಶ್ಮೀರಿಗಳು ಸಾಯುತ್ತಿದ್ದಾರೆ. ಮೋದಿ ಬಲೂಚಿಸ್ತಾನವನ್ನು ಪ್ರತ್ಯೇಕಿಸುವ ಮಾತನ್ನಾಡುತ್ತಿದ್ದಾರೆ. ಯಾಕೆ ನಮ್ಮ ಪ್ರಧಾನಿ ಸುಮ್ಮನಿದ್ದಾರೆ. ಅದೇ ರೀತಿಯಲ್ಲಿ ಪ್ರತ್ಯುತ್ತರವನ್ನು ನೀಡುತ್ತಿಲ್ಲವೇಕೆ ಎಂದಾತ ಪ್ರಶ್ನಿಸಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

ಕರ್ನೂಲ್ ಭೀಕರ ಬಸ್ ಬೆಂಕಿ ಅವಘಡ, ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಸಲಹೆ ಹೀಗಿದೆ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕ್ತೀಯಾ, ನಾನು ಹಾಗಲ್ಲ: ಪ್ರದೀಪ್ ಈಶ್ವರ್

ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ದೆಹಲಿಯಲ್ಲಿ ಈ ವ್ಯಾಪಾರದಲ್ಲಿ ಭಾರೀ ಏರಿಕೆ

ಮುಂದಿನ ಸುದ್ದಿ
Show comments