Select Your Language

Notifications

webdunia
webdunia
webdunia
webdunia

ಮಸಾಜ್ ಪಾರ್ಲರ್‌ನಲ್ಲಿ ಸೆಕ್ಸ್ ರಾಕೆಟ್, 5 ಯುವತಿಯರ ಬಂಧನ

ಮಸಾಜ್ ಪಾರ್ಲರ್‌ನಲ್ಲಿ ಸೆಕ್ಸ್ ರಾಕೆಟ್, 5 ಯುವತಿಯರ ಬಂಧನ
ಗುರಗಾಂವ್ , ಬುಧವಾರ, 23 ಏಪ್ರಿಲ್ 2014 (20:13 IST)
ಚಕ್ರಪುರ ಪ್ರದೇಶದಲ್ಲಿನ ಪೇಯಿಂಗ್ ಗೆಸ್ಟ್ ಹೊಟೇಲ್ ಒಂದರಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆಯಾದ 3 ದಿನಗಳಲ್ಲಿಯೇ ಮಿಲೇನಿಯಮ್ ಸಿಟಿಯ ಡಿಟಿ ಸೆಂಟರ್‌ನ ಎಮ್ ಜಿ ರಸ್ತೆಯ ಮಸಾಜ್ ಪಾರ್ಲರ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರ ಒಂದರ ಮೇಲೆ ದಾಳಿ ನಡೆಸಿ 5 ಜನ ಮಹಿಳೆಯರು ಮತ್ತು ಒಬ್ಬ ಗ್ರಾಹಕನನ್ನು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.  
 
ಆರೋಪಿಗಳ ವಿರುದ್ಧ ನಗರದ ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪೊಲೀಸರ ಪ್ರಕಾರ, ಮಸಾಜ್ ಕೋಣೆಯಲ್ಲಿನ ಎರಡನೇ ಮಹಡಿಯಲ್ಲಿ ಸಂಜೆ 6.45 ಗಂಟೆಗೆ ಒಂದು ಕುಟುಕು ಕಾರ್ಯಾಚರಣೆ ನಡೆಸಿ ಒಬ್ಬರು ಗ್ರಾಹಕ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. 
 
ಮಸಾಜ್ ಪಾರ್ಲರ್ ದೆಹಲಿ ಮೂಲದ ವ್ಯಾಪಾರಿಯ ಒಡೆತನದಲ್ಲಿದ್ದು ಸಂಗ್ರಹಿಸಿಡಲಾಗಿದ್ದ ಕಾಂಡೋಮ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 20 ರಿಂದ 25 ವರ್ಷ ವಯಸ್ಸಿನ ಯುವತಿಯರನ್ನು ಬಂಧಿಸಲಾಗಿದ್ದು ಅವರೆಲ್ಲರೂ ಮಣಿಪುರ್ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ಸೇರಿದವರೆಂದು ಗುರುತಿಸಲಾಗಿದೆ. 
 

Share this Story:

Follow Webdunia kannada