Webdunia - Bharat's app for daily news and videos

Install App

ಪಾಕ್‌ನಲ್ಲಿ ಸ್ಮಾರ್ಟ್ ಫೋನ್‌ಗಿಂತ ಗನ್ ಅಗ್ಗ

Webdunia
ಗುರುವಾರ, 28 ಜುಲೈ 2016 (16:41 IST)
ಅಶಾಂತಿ, ಉಗ್ರವಾದಕ್ಕೆ ಮತ್ತೊಂದು ಹೆಸರು ಪಾಕಿಸ್ತಾನ. ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದಲ್ಲಿ ಬಂದೂಕು, ಪಿಸ್ತೂಲು, ವಿಧ್ವಂಸಕ ಸಾಧನಗಳು ಸ್ಮಾರ್ಟ್ ಫೋನ್‌ಗಿಂತ ಅಗ್ಗದ ದರದಲ್ಲಿ ಮಾರಾಟವಾಗುತ್ತದೆ ಎಂದರೆ ನಂಬುತ್ತೀರಾ? ಹೌದು ಗುಡ್ಡಗಾಡು ನಗರ  ದರ್ರಾ ಆದಂಖೇಲ್ ಎಂಬ ಪಟ್ಟಣದಲ್ಲಿ ಸ್ಮಾರ್ಟ್​ಫೋನಿಗಿಂತ ಕಡಿಮೆ ದರದಲ್ಲಿ, ಉತ್ಪಾದನಾ ವೆಚ್ಚದಲ್ಲಿಯೇ ಕಾಳ ಸಂತೆಯಲ್ಲಿ ಪಿಸ್ತೂಲು, ಬಂದೂಕುಗಳು ಮಾರಾಟವಾಗುತ್ತವೆ.


ಪೇಶಾವರದಿಂದ ದಕ್ಷಿಣಕ್ಕೆ 35 ಕಿ ಮೀ ದೂರದಲ್ಲಿರುವ ಈ ಪಟ್ಟಣ ಬೆಟ್ಟಗುಡ್ಡಗಳಿಂದ ಸುತ್ತುವರೆದಿದ್ದು ದಶಕಗಳಿಂದ ಅಪರಾಧ ಚಟುವಟಿಕೆಗಳ ಕೇಂದ್ರವಾಗಿದೆ. ಕಳ್ಳಸಾಗಾಣಿಕೆ, ಡ್ರಗ್ ಮಾಫಿಯಾ ಇಲ್ಲಿ ಸಾಮಾನ್ಯವಾಗಿದ್ದು ಕದ್ದ ಕಾರಿನಿಂದ ಹಿಡಿದು ವಿಶ್ವವಿದ್ಯಾಲಯ ಪದವಿಯ ನಕಲಿ ಪ್ರಮಾಣಪತ್ರಗಳು ಸಹ ಸಿಗುತ್ತವೆ.

ಎಲ್ಲ ಮಾದರಿ ಬಂದೂಕು, ಪಿಸ್ತೂಲು, ಸ್ಪೋಟಕಗಳು ಸುಲಭವಾಗಿ ಲಭ್ಯವಿದ್ದು 1980 ರಿಂದ ಇಲ್ಲಿ ದಂಧೆ ನಡೆಯುತ್ತಿದೆ.  ಪಾಕ್ ಗಡಿಯ ತಾಲಿಬಾನಿ ಉಗ್ರರ ಸ್ಪೋಟಕ ಖರೀದಿ ತಾಣವಾಗಿದೆ ಇದು. ನವಾಜ್ ಷರೀಫ್ ಪ್ರಧಾನಿಯಾದ ಬಳಿಕ ಅಕ್ರಮ ವ್ಯಾಪಾರಕ್ಕೆ ಸ್ವಲ್ಪ ಮಟ್ಟಿನ ಕಡಿವಾಣ ಬಿದ್ದಿದೆ ಎನ್ನುತ್ತಾನೆ ವ್ಯಾಪಾರಿ ಖಿತಾಬ್ ಗುಲ್.

ಅಮೆರಿಕ ಸೇನೆಯಲ್ಲಿ ಬಳಸಲಾಗುವ ಎಮ್ ಪಿ-5 ಮಾದರಿಯ ಸಬ್​ವೆುಷಿನ್ ಗನ್​ಗಳಿಂದ ಹಿಡಿದು ತರೇಹವಾರಿ ಗನ್‌ಗಳು  ಇಲ್ಲಿ ಸಿಗುತ್ತವೆ. ಕಳೆದ 10 ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಗನ್​ಗಳನ್ನು ಮಾರಾಟ ಮಾಡಿದ್ದೇನೆ ಎನ್ನುತ್ತಾನೆ ಗುಲ್.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments