Select Your Language

Notifications

webdunia
webdunia
webdunia
webdunia

ಪತಿ ಕಪ್ಪುಬಣ್ಣದವನೆಂದು ಹೀಯಾಳಿಸಿ ಹತ್ಯೆ ಮಾಡಿದ ಪಾಪಿ ಪತ್ನಿ

ಪತಿ ಕಪ್ಪುಬಣ್ಣದವನೆಂದು ಹೀಯಾಳಿಸಿ ಹತ್ಯೆ ಮಾಡಿದ ಪಾಪಿ ಪತ್ನಿ
ಆನಂದ್(ಗುಜರಾತ್) , ಶುಕ್ರವಾರ, 24 ಏಪ್ರಿಲ್ 2015 (16:24 IST)
ಪತಿ ಕಪ್ಪು ಬಣ್ಣದವನಾಗಿದ್ದಾನೆ ಎಂದು ಆಕ್ರೋಶಗೊಂಡ ಪತ್ನಿ ಆತನನ್ನು ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆನಂದ್ ಜಿಲ್ಲೆಯ ಪೆಟ್ಲಾದ್ ತಾಲೂಕಿನ ಸುಂದರಾನಾ ಗ್ರಾಮದ ನಿವಾಸಿಯಾದ 22 ವರ್ಷ ವಯಸ್ಸಿನ ಫರ್ನಾಬಾನೋ, ತನ್ನ ಪತಿಯ ಕಪ್ಪು ಬಣ್ಣದ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಳು. ಪತಿಯನ್ನೇ ನೋಡಿದರೆ ಆಕೆಗೆ ಅಸಹ್ಯವಾಗಿದ್ದರಿಂದ ಆತನನ್ನು ಹತ್ಯೆ ಮಾಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೆ.ಆರ್ .ಗೆಹ್ಲೋಟ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಫರ್ಜಾನಾ ಮತ್ತು ಫಾರೂಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಪತಿಯ ಬಣ್ಣದ ಬಗ್ಗೆ ಪತ್ನಿ ಫರ್ಜಾನಾ ಅವಹೇಳನ ಮಾಡುತ್ತಿದ್ದರಿಂದ ದಂಪತಿಗಳ ನಡುವೆ ದೈಹಿಕ ಸಂಬಂಧ ನಡೆದಿರಲಿಲ್ಲ. ಇದು ಕೆಲ ಬಾರಿ ವಾಗ್ವಾದಕ್ಕೆ ಕೂಡಾ ಕಾರಣವಾಗಿತ್ತು.

ಪತಿ ತನ್ನೊಂದಿಗೆ ದೇಹ ಸುಖ ಬಯಸಬಹುದು ಎನ್ನುವ ಆತಂಕದಿಂದ ಫರ್ಜಾನಾ ಹೆಚ್ಚಿನ ಅವಧಿಯನ್ನು ತವರು ಮನೆಯಲ್ಲಿಯೇ ಕಳೆಯುತ್ತಿದ್ದಳು ಎನ್ನಲಾಗಿದೆ.

ಏತನ್ಮಧ್ಯೆ, 10 ದಿನಗಳ ಹಿಂದೆ ಪತಿಯ ಮನೆಗೆ ಬಂದ ಫರ್ಜಾನಾಗೆ ಗಂಡ ಸೆಕ್ಸ್‌ ಮಾಡುವ ಬಾ ಎಂದು ಕರೆದಿದ್ದಾನೆ. ಆದರೆ, ಆಕೆ ಅದಕ್ಕೊಪ್ಪಲಿಲ್ಲ. ಇದರಿಂದ ಆಕ್ರೋಶಗೊಂಡ ಪತಿ ಫಾರುಕ್ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ.

ಇಂದು ಬೆಳಿಗ್ಗೆ ತನ್ನೊಂದಿಗೆ ಹೊಲಕ್ಕೆ ಬರುವಂತೆ ಫಾರುಕ್ ಪತ್ನಿ ಫರ್ಜಾನಾಗೆ ಕೋರಿದ್ದಾನೆ. ಹೊಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಫರ್ಜಾನಾ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾಳೆ.

ಆರೋಪಿ ಮಹಿಳೆ ಫರ್ಜಾನಾ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada