Select Your Language

Notifications

webdunia
webdunia
webdunia
webdunia

ಹುಡುಗಿಯರೇ ದಯವಿಟ್ಟು ಜೀನ್ಸ್ ಮತ್ತು ಶಾರ್ಟ್ಸ್ ಧರಿಸುವುದನ್ನು ನಿಲ್ಲಿಸಿ: ಗುಜರಾತ್ ಪೋಲಿಸ್

ಹುಡುಗಿಯರೇ ದಯವಿಟ್ಟು ಜೀನ್ಸ್ ಮತ್ತು ಶಾರ್ಟ್ಸ್ ಧರಿಸುವುದನ್ನು ನಿಲ್ಲಿಸಿ: ಗುಜರಾತ್ ಪೋಲಿಸ್
ಗಾಂಧಿ ನಗರ , ಬುಧವಾರ, 20 ಆಗಸ್ಟ್ 2014 (16:18 IST)
ಗುಜರಾತ್ ಪೋಲಿಸರು ಈಗ ಹುಡುಗಿಯರಿಗೆ ನೈತಿಕತೆಯನ್ನು ಹೇಳಿಕೊಡಲು ಹೊರಟಿದ್ದಾರೆ. 

ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ  ಪೋರ್‌ಬಂದರ್ ಪೋಲಿಸರು ಯುವತಿಯರಿಗೆ ಜೀನ್ಸ್ ಮತ್ತು ಶಾರ್ಟ್ಸ್ ಧರಿಸಬೇಡಿ ಎಂದು ಸಲಹೆ ನೀಡುವ ಪೋಸ್ಟರ್‌ಗಳನ್ನು ಹಚ್ಚಿದ್ದಾರೆ. 
 
ಪೋಸ್ಟರ್‌ಗಳನ್ನು ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ ರೂಪಿಸಲಾಗಿತ್ತು.ವಿಪರ್ಯಾಸವೆಂದರೆ, ಇದರಲ್ಲಿ ಪೊಲೀಸರು ಮಹಿಳೆಯರೇ ಸರಿಯಾಗಿ ಬಟ್ಟೆ ಧರಿಸಿ ಎಂದು ಆಗ್ರಹಿಸುತ್ತಿದ್ದಾರೆ. 
 
ಸಾಮಾನ್ಯವಾಗಿ, ಉತ್ತರ ಭಾರತದಲ್ಲಿ ಜಾತಿ ಪಂಚಾಯತ್‌ಗಳು ಮತ್ತು ಮೂಲಭೂತವಾದಿಗಳಿಂದ ಮಹಿಳೆಯರ ಮೇಲೆ  ಮಾರ್ಗಸೂಚಿಗಳು ಬಲವಂತವಾಗಿ ಹೇರಲ್ಪಡುತ್ತವೆ. ಆದರೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಯಾರು ನೇಮಕಗೊಂಡಿದ್ದಾರೋ ಅವರೇ ಈ ರೀತಿಯ ನಿಯಮಗಳನ್ನು ತರುತ್ತಿರುವುದು ಸಮಾಜದಲ್ಲಿ ಕೋಲಾಹಲವನ್ನು ಸೃಷ್ಟಿ ಮಾಡುವ ಸಂಭವವಿದೆ. 
 
ಇದು ಮುಖ್ಯಮಂತ್ರಿ ಆನಂದಿಬೆನ್ ನೇತೃತ್ವದ ಗುಜರಾತ್ ಸರಕಾರದ ಮೇಲೂ ಪ್ರಶ್ನೆಯನ್ನೆತ್ತಿದೆ ಎನ್ನುವುದು ಮಹಿಳೆಯರ ಆಕ್ರೋಶವಾಗಿದೆ. 

Share this Story:

Follow Webdunia kannada