Select Your Language

Notifications

webdunia
webdunia
webdunia
webdunia

ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಕಡ್ಡಾಯ: ಗುಜರಾತ್ ಸರಕಾರ ಅಧಿಸೂಚನೆ

ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಕಡ್ಡಾಯ: ಗುಜರಾತ್ ಸರಕಾರ ಅಧಿಸೂಚನೆ
ವಡೋದರಾ , ಮಂಗಳವಾರ, 28 ಜುಲೈ 2015 (15:13 IST)
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಲೇಬೇಕು ಎಂದು ಅಧಿಸೂಚನೆ ಹೊರಡಿಸಿದ ಗುಜರಾತ್ ಸರಕಾರ ದೇಶದಲ್ಲಿಯೇ ಕಡ್ಡಾಯ ಮತದಾನ ಜಾರಿಗೊಳಿಸಿದ ಮೊದಲನೆ ರಾಜ್ಯವಾಗಿದೆ. 
 
ಕಾರ್ಪೋರೇಶನ್, ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿಯನ್ನು ಘೋಷಿಸಿದ ನಂತರ ಕಡ್ಡಾಯ ಮತದಾನ ಕಾಯ್ದೆಯನ್ನು ಜಾರಿಗೆ ತಂದಿದೆ. 
 
ಗುಜರಾತ್‌ನ ಸ್ಥಳೀಯ ಜಿಲ್ಲಾಡಳಿತ ಕಾಯ್ದೆ (ತಿದ್ಗುಪಡಿ)2009ರ ಅನ್ವಯ ಮತದಾರನು ಸ್ವೀಕಾರ್ಹವಲ್ಲದ ಕಾರಣ ನೀಡದೆ ಮತದಾನ ಮಾಡದಿದ್ದಲ್ಲಿ ಅಂತಹ ಮತದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸರಕಾರ ಆಅದೇಶ ಹೊರಡಿಸಿದೆ.  
 
ರಾಜ್ಯದಲ್ಲಿ ಸೆಪ್ಟೆಂಬರ್ ಅಥವಾ ಆಕ್ಟೋಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಮತದಾನ ಮಾಡುವಲ್ಲಿ ವಿಫಲನಾದ ಮತದಾರನಿಗೆ ಯಾವ ಶಿಕ್ಷೆ ನೀಡಲಾಗುವುದು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸರಕಾರದಿಂದ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ.
 
ರಾಜ್ಯ ಸರಕಾರ ಕಡ್ಡಾಯ ಮತದಾನದ ಬಗ್ಗೆ ನೋಟಿಸ್ ಜಾರಿಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಸ್ಪಷ್ಟ ಮಾಹಿತಿ ಬಹಿರಂಗವಾಗಲಿದೆ ಎಂದು ರಾಜ್ಯದ ಆರೋಗ್ಯ ಖಾತೆ ಸಚಿವ ನಿತಿನ್ ಪಟೇಲ್ ತಿಳಿಸಿದ್ದಾರೆ. 
 

Share this Story:

Follow Webdunia kannada