ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಅವರಿಗೆ ಐಷಾರಾಮಿ ಜಾಗ್ವಾರ್ ಎಕ್ಸ್‌ಇ ಕಾರು ನೀಡಿರುವ ಕೇಂದ್ರ ಸರಕಾರದ ಕ್ರಮ ವಿಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿದೆ.
ಲೋಕಸಭೆಯ ಕಾರ್ಯದರ್ಶಿ ಡಿ.ಭಲ್ಲಾ ಮಾತನಾಡಿ, ಸುರಕ್ಷತೆಯ ಕಾರಣಗಳನ್ನು ಪರಿಶೀಲಿಸಿ 48.25 ಲಕ್ಷ ರೂಪಾಯಿಗಳ ಬೆಲೆಬಾಳುವ ಐಷಾರಾಮಿ ಜಾಗ್ವಾರ್ ಕಾರುಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಐಷಾರಾಮಿ ಜಾಗ್ವಾರ್ ಕಾರು ಪಡೆಯುವ ಬಗ್ಗೆ ಮರು ಪರಿಶೀಲನೆ ನಡೆಸುವುದು ಸೂಕ್ತ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮಾತನಾಡಿ, ದೇಶದ ಒಂದನೇ ಮೂರು ಭಾಗ ಬರಗಾಲದಿಂದ ತತ್ತರಿಸಿರುವಾಗ ಸ್ಪೀಕರ್, ಐಷಾರಾಮಿ ಕಾರು ಪಡೆಯುವುದು ಸರಿಯೇ ಎನ್ನುವ ಬಗ್ಗೆ ಅವರೇ ನಿರ್ಧರಿಸಲಿ ಎಂದು ಹೇಳಿದ್ದಾರೆ.
ಭದ್ರತಾ ಏಜೆನ್ಸಿಗಳ ಮಾಹಿತಿಯ ಮೇರೆಗೆ ಸಭಾಪತಿಯವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಐದಾರು ಕಾರುಗಳ ಮಾಡೆಲ್‌ಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ ಜಾಗ್ವಾರ್ ಕಾರು ಸೂಕ್ತವಾಗಿದ್ದರಿಂದ ಅದನ್ನು ಖರೀದಿಸಲಾಗಿದೆ ಎಂದು ಭಲ್ಲಾ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು, ಮಾಜಿ ರಾಷ್ಟ್ರಾಧ್ಯಕ್ಷರು, ಉಪಪ್ರಧಾನಿ ನಂತರದ ಸ್ಥಾನವನ್ನು ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಹೊಂದಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.