Select Your Language

Notifications

webdunia
webdunia
webdunia
webdunia

ಸಿಬ್ಬಂದಿ ಬಿಕನಿ ಧರಿಸಿ ಕಚೇರಿಗೆ ಬರಲು ಸರಕಾರ ಅವಕಾಶ ಕೊಡಬೇಕು: ಕಾಂಗ್ರೆಸ್ ಶಾಸಕ

ಸಿಬ್ಬಂದಿ ಬಿಕನಿ ಧರಿಸಿ ಕಚೇರಿಗೆ ಬರಲು ಸರಕಾರ ಅವಕಾಶ ಕೊಡಬೇಕು: ಕಾಂಗ್ರೆಸ್ ಶಾಸಕ
ಪಣಜಿ , ಗುರುವಾರ, 26 ಮಾರ್ಚ್ 2015 (16:02 IST)
ಗೋವಾ ಸರಕಾರದ ಕಲೆ ಮತ್ತು ಸಂಸ್ಕ್ರತಿ ಸಚಿವಾಲಯ ಸಿಬ್ಬಂದಿಗಳಿಗೆ ಡ್ರೆಸ್‌ಕೋಡ್ ನಿಗದಿಪಡಿಸಿರುವುದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ, ಸಿಬ್ಬಂದಿಗಳು ಕಚೇರಿಗಳಿಗೆ ಬಿಕನಿ ಧರಿಸಿ ಬರುವುದಕ್ಕೆ ಅವಕಾಶ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ.   

ನೌಕರರು ತಮಗೆ ಇಷ್ಟ ಬಂದ ಡ್ರೆಸ್‌ಗಳನ್ನು ಧರಿಸಿ ಕಚೇರಿಗೆ ಬರಲು ಅನುಮತಿ ನೀಡಬೇಕು. ಬಿಕನಿ ಕೂಡಾ ಧರಿಸಿಬಂದರೂ ಅವರಿಗೆ ಅವಕಾಶ ಕೊಡಬೇಕು ಎಂದು ಅಲೆಕ್ಸಿ ರೇಗಿನಾಲ್ಡೋ ಲೌರೆನ್ಕೋ ಸಲಹೆ ನೀಡಿದ್ದಾರೆ.

ಗೋವಾ ಸರಕಾರದ ಕಲೆ ಮತ್ತು ಸಂಸ್ಕ್ರತಿ ಸಚಿವಾಲಯ ಸಿಬ್ಬಂದಿಗಳು ಸ್ಲೀವ್‌ಲೆಸ್ ಬ್ಲೌಸ್ ಬಹುಪಾಕೆಟ್ ಪ್ಯಾಂಟ್ ಮತ್ತು  ಜೀನ್ಸ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ವಿಧಾನಸಭೆಗೆ ಮಾಹಿತಿ ನೀಡಿದೆ.

ರಾಜ್ಯದ ಕಲೆ ಮತ್ತು ಸಂಸ್ಕ್ರತಿ ಖಾತೆ ಸಚಿವ ದಯಾನಂದ ಮಾಂಡ್ರೆಕರ್ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮಾತನಾಡಿ, ಸರಕಾರದ ಆದೇಶವನ್ನು ಸಿಬ್ಬಂದಿಗಳು ಪಾಲಿಸುತ್ತಿರುವ ಗಮನಹರಿಸಲು ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇಲಾಖೆಯ ಸಿಬ್ಬಂದಿಗಳು ಫಾರ್ಮಲ್ ಡ್ರೆಸ್‌ ಧರೆಸಬೇಕೆ ಹೊರತು ಜೀನ್ಸ್ ಧರಿಸುವಂತಿಲ್ಲ. ಟೀ-ಶರ್ಟ್, ಜರ್ಕಿನ್ ಸ್ಲೀವ್ ಲೆಸ್ ಡ್ರೆಸ್‌ಗಳು ಇತ್ಯಾದಿ ಕಚೇರಿಯ ಸಮಯದಲ್ಲಿ ಧರಿಸುವಂತಿಲ್ಲ ಎಂದು ಇಲಾಖೆಯ ನಿರ್ದೇಶಕ ಪ್ರಸಾದ್ ಲೊಲಾಯೆಕರ್ ಇಲಾಖೆ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಜ್ಯ ಸರಕಾರದ ಡ್ರೆಸ್ ಕೋಡ್ ಆದೇಶದ ಪಾಲನೆಯಾಗುತ್ತಿದೆಯೋ ಇಲ್ಲವೋ ಎನ್ನುವ ಬಗ್ಗೆ ಉಪನಿರ್ದೇಶಕರು ನಿಗಾವಹಿಸಬೇಕು ಎಂದು ಸರಕಾರ ಆದೇಶ ನೀಡಿದೆ.

ಕೆಲ ವಾರಗಳ ಹಿಂದೆ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಸಚಿವರು ದೇಶದ ಸಂಸ್ಕ್ರತಿಗೆ ವಿರುದ್ಧವಾಗಿರುವ ಎಲ್ಲಾ ಬಗೆಯ ಡ್ರೆಸ್‌ಗಳನ್ನು ನಿಷೇಧ ಹೇರುವಂತೆ  ಸರಕಾರದ ಮೇಲೆ ಒತ್ತಡ ತಂದಿದ್ದರು.

Share this Story:

Follow Webdunia kannada