ಗೋಧಿ ರಫ್ತಿಗೆ ಕೇಂದ್ರ ನಿರ್ಬಂಧ

Webdunia
ಶನಿವಾರ, 14 ಮೇ 2022 (14:46 IST)
ಗೋಧಿ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಗೋಧಿ ರಫ್ತನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ.
ಜಗತ್ತಿನಲ್ಲೇ ಅತೀ ಹೆಚ್ಚು ಗೋಧಿ ಉತ್ಪಾದಿಸುವ ಎರಡನೇ ದೇಶವಾಗಿರುವ ಭಾರತದಲ್ಲಿ ಗೋಧಿ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶನಿವಾರ ಈ ಆದೇಶ ಹೊರಡಿಸಿದೆ.
ಗೋಧಿ ದರ ಕೆಜಿಗೆ 34ರಿಂದ 35 ರೂ. ತಲುಪಿದ್ದು, 14 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ಜಿಗಿತ ಕಂಡಿದೆ. ಸಾಮಾನ್ಯ ದರಕ್ಕಿಂತ ಶೇ.15ರಿಂದ 20ರಷ್ಟು ಏರಿಕೆಯಾಗಿದೆ.
ಗೋಧಿಯ ರಫ್ತಿಗೆ ಈಗಾಗಲೇ ಅನುಮತಿ ಪಡೆದು ಮುಂಗಡ ಹಣ ಪಡೆದಿದ್ದರೆ ಮಾತ್ರ ರಫ್ತು ಮಾಡಬಹುದಾಗಿದ್ದು, ಯಾವುದೇ ಹೊಸ ಆರ್ಡರ್ ಪಡೆದು ರಫ್ತು ಮಾಡುವಂತಿಲ್ಲ ಎಂದು ಕೇಂದ್ರ ಸರಕಾರ ಆದೇಶದಲ್ಲಿ ವಿವರಿಸಿದೆ.
ಕಪ್ಪು ಸಮುದ್ರದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ರಫ್ತು ಸಾಗಾಟಕ್ಕೆ ಅಡ್ಡಿಯಾಗಿರುವುದರಿಂದ ಗೋಧಿ ದರ ಸತತವಾಗಿ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಯುರೋಪ್ ದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಇಂಡಿಗೋ ವಿಮಾನ ವ್ಯತ್ಯಯದಿಂದ ಕೋಟಿ ಕೋಟಿ ನಷ್ಟ, ಇದುವರೆಗೆ ಮರುಪಾವತಿಯಾದ ಮೊತ್ತವೆಷ್ಟು ಗೊತ್ತಾ

ದಿತ್ವಾ ಚಂಡಮಾರುತಕ್ಕೆ ತತ್ತರಿಸಿರುವ ಶ್ರೀಲಂಕಾದ ಕಡೆ ಹೊರಟ ಭಾರತದ ನಾಲ್ಕು ನೌಕಾಪಡೆ

ದೆಹಲಿ ಸ್ಫೋಟ ಪ್ರಕರಣ, ಎಲ್ಲ ಆರೋಪಿಗಳ ಎನ್‌ಐಎ ಕಸ್ಟಡಿ ವಿಸ್ತರಣೆ

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ಕೆಎನ್ ರಾಜಣ್ಣ ಹೇಳಿಕೆ

ಮುಂದಿನ ಸುದ್ದಿ
Show comments