Select Your Language

Notifications

webdunia
webdunia
webdunia
webdunia

ಸದನ ಸುಸೂತ್ರಕ್ಕೆ ಸರ್ಕಸ್: ಸರ್ವ ಪಕ್ಷಗಳ ಸಭೆ

ಸದನ ಸುಸೂತ್ರಕ್ಕೆ ಸರ್ಕಸ್: ಸರ್ವ ಪಕ್ಷಗಳ ಸಭೆ
ನವದೆಹಲಿ , ಸೋಮವಾರ, 3 ಆಗಸ್ಟ್ 2015 (11:04 IST)
ನಿರಂತರವಾಗಿ ಮುಂದೂಡಲಾಗುತ್ತಿರುವ ಲೋಕಸಭಾ ಕಲಾಪ ಸುಗಮಗೊಳಿಸುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಭೆ ಕರೆದಿದೆ.

ಸ್ಪೀಕರ್‌ ಸುಮಿತ್ರಾ ಮಹಾಜನ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸಹ ಸಭೆಯಲ್ಲಿ ಭಾಗವಹಿಸುತ್ತಿದೆ.
 
ಇನ್ನು ಮುಂದೆ ಸಂಸತ್ತಿನಲ್ಲಿ ತಮ್ಮ ನಡೆ ಹೇಗಿರಬೇಕು ಎಂಬುದನ್ನು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಇಂದು ಮುಂಜಾನೆ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ ನಡೆಸಿದ್ದು ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರೆಸಲು ಸಭೆ ತೀರ್ಮಾನಿಸಿದೆ.ಆಡಳಿತಾರೂಢ ಸರಕಾರ ಸಂವೇದನಾಶೀಲವಾಗಿರಬೇಕು, ಪ್ರತಿಪಕ್ಷಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ನಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಪ್ರತಿಭಟನೆ ಮುಂದುವರೆಯಲಿದೆ. ನಮ್ಮ ಆಗ್ರಹಕ್ಕೆ ಸರಕಾರ ಸೂಕ್ತವಾಗಿ ಸ್ಪಂದಿಸಿದರೆ ಮಾತ್ರ ನಾವು ಸುಗಮ  ಕಲಾಪಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಸೋನಿಯಾ ಗಾಂಧಿ  ಹೇಳಿದ್ದಾರೆ. 
 
ಪ್ರಧಾನಿ ಮೋದಿಯವರು ಸಹ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 
 
‌ಲಲಿತ್‌ ಮೋದಿ ವಿವಾದ ಹಾಗೂ ಇಬ್ಬರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸಿದ ಗದ್ದಲದಿಂದಾಗಿ ಲೋಕಸಭೆಯ ಮಂಗಾರು ಅಧಿವೇಶನದ ಕಲಾಪ ಪದೇ ಪದೇ ಮುಂದೂಡಲಾಗುತ್ತಿದೆ. ಜುಲೈ 21ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡಿತಾದರೂ ಇದುವರೆಗೆ ಒಂದು ದಿನವೂ ಸುಗಮವಾಗಿ ಕಲಾಪ ನಡೆದಿಲ್ಲ.  ಕನಿಷ್ಠ ಒಂದು ದಿನವೂ ಕೂಡ ಕಲಾಪ ನಡೆಯದಿರುವುದು ಆಡಳಿತಾರೂಢ ಎನ್‌ಡಿಎಗೆ ತಲೆನೋವಾಗಿ ಸಂಭವಿಸಿದೆ. 
 
ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಬಿಟ್ಟು ಉಳಿದ ವಿರೋಧ ಪಕ್ಷಗಳು ಚರ್ಚೆಗೆ ತಯಾರಾಗಿವೆ. ಆದರೆ ಕಾಂಗ್ರೆಸ್ ತನ್ನ ಹಠವನ್ನು ಸಡಲಿಸುತ್ತಿಲ್ಲವಾದ್ದರಿಂದ  ಕಲಾಪ ಸಾಧ್ಯವಾಗುತ್ತಿಲ್ಲ. 
 
''ಜನರ ಬವಣೆಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಲು ನಾವು ಸಿದ್ಧ. ಆದರೆ ಪ್ರಮುಖ ವಿರೋಧ ಪಕ್ಷಗಳು ನಡೆಸುತ್ತಿರುವ ಕೋಲಾಹಲದಲ್ಲಿ ನಮಗೆ ಧ್ವನಿ ಎತ್ತಲು ಅವಕಾಶ ಸಿಗುತ್ತಿಲ್ಲ ,'' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ  ಖೇದ ವ್ಯಕ್ತ ಪಡಿಸಿದ್ದಾರೆ. 
 
ಸಂಸದರು ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೆ ಅವರ ವೇತನ ಕಡಿತ ಮಾಡುವುದರ ಕುರಿತು ತೀವ್ರ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದೆ. 10 ದಿನಗಳ ಕಲಾಪ ಹಾಳಾಗಿರುವುದರಿಂದ ಬೊಕ್ಕಸಕ್ಕೆ 90 ಕೋಟಿ ನಷ್ಟವಾಗಿದೆ.

Share this Story:

Follow Webdunia kannada