Select Your Language

Notifications

webdunia
webdunia
webdunia
webdunia

857 ಪೋರ್ನ್ ಸೈಟ್‌ಗಳನ್ನು ಬ್ಲಾಕ್ ಮಾಡಿದ ಮೋದಿ ಸರಕಾರ

857 ಪೋರ್ನ್ ಸೈಟ್‌ಗಳನ್ನು ಬ್ಲಾಕ್ ಮಾಡಿದ ಮೋದಿ ಸರಕಾರ
ನವದೆಹಲಿ , ಸೋಮವಾರ, 3 ಆಗಸ್ಟ್ 2015 (18:16 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ 857 ಅಶ್ಲೀಲ್ ವೆಬ್‌ಸೈಟ್‌ಗಳನ್ನು ರದ್ದುಗೊಳಿಸುವ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರಿಗೆ ಆಘಾತ ನೀಡಿದೆ. 
 
ಅಶ್ಲೀಲ ಚಿತ್ರಗಳನ್ನು ವೀಕ್ಷಿಸಬಯಸುವವರು ಪೋರ್ನ್ ಸೈಟ್‌ಗಳನ್ನು ತೆರೆದಾಗ ಅಲ್ಲಿ ಖಾಲಿ ಪೇಜ್‌ಗಳನ್ನು ನೋಡಿ ಆಘಾತಗೊಂಡು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. 
 
ಕೇಂದ್ರ ಸರಕಾರದ ಆದೇಶದ ಮೇರೆಗೆ ಟೆಲಿಕಾಂ ಇಲಾಖೆ ಪೋರ್ನ್‌ವೆಬ್‌ಸೈಟ್‌ಗಳನ್ನು ಲಾಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಇಂಟರ್‌ನೆಟ್ ಸೇವೆಗಳನ್ನು ನೀಡುವ ವೋಡಾಫೋನ್, ಎಂಟಿಎನ್‌ಎಲ್, ಎಸಿಟಿ, ಹಾಥ್‌ವೇ ಮತ್ತು ಬಿಎಸ್‌ಎನ್‌ಎಲ್ ಪೋರ್ನ್ ಸೈಟ್‌ಗಳನ್ನು ಬ್ಲಾಕ್ ಮಾಡಿವೆ,
 
ಅಸಂತುಷ್ಟರಾಗಿರುವ ಪೋರ್ನ್ ವೆಬ್‌ಸೈಟ್ ಅಭಿಮಾನಿಗಳು ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ತಮ್ಮ ಆಕ್ರೋಶನ್ನು ವ್ಯಕ್ತಪಡಿಸಿದ್ದು, ನಿನ್ನೆ ತುಂಬಾ ಹಾಟ್ ವಿಷಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada