Select Your Language

Notifications

webdunia
webdunia
webdunia
webdunia

ಸಾಮಾನ್ಯರಿಗೆ ನೀಡುವಂತೆಯೇ ನನಗೂ ತೀರ್ಪು ನೀಡಿ: ಸಲ್ಮಾನ್

ಸಾಮಾನ್ಯರಿಗೆ ನೀಡುವಂತೆಯೇ ನನಗೂ ತೀರ್ಪು ನೀಡಿ: ಸಲ್ಮಾನ್
ಮುಂಬೈ , ಬುಧವಾರ, 6 ಮೇ 2015 (12:33 IST)
ಹಿಟ್ ಅಂಡ್ ರನ್ ಪ್ರಕರಣದಲ್ಲಿ ದೋಷಿಯಾಗಿರುವ ಸಲ್ಮಾನ್, ತಮ್ಮ ಶಿಕ್ಷೆ ಪ್ರಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ನಾನು ಸಾಮಾನ್ಯ ಜನರಂತೆಯೇ ಪ್ರಕರಣವನ್ನು ಎದುರಿಸಿದ್ದು, ಅವರಿಗೆ ನೀಡುವಂತಹ ರೀತಿಯಲ್ಲಿಯೇ ತೀರ್ಪನ್ನು ನೀಡಿ ಎಂದು ಎಂದು ಮನವಿ ಮಾಡಿಕೊಂಡಿದ್ದಾರೆ. 
 
ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಸ್ಲಮಾನ್ ಪರ ವಕೀಲರು ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸುತ್ತಿದ್ದು, ಶಿಕ್ಷೆ ಪ್ರಮಾಣವನ್ನು ಗರಿಷ್ಠ 2 ವರ್ಷಕ್ಕಿಳಿಸಬೇಕೆಂದು ಮನವಿ ಮಾಡಿಕೊಂಡರು. ಇದೇ ವೇಳೆ ಪ್ರತಿಕ್ರಿಯಿಸಿದ ಆರೋಪಿ ಸಲ್ಮಾನ್, ನಾನು ಸಾಮಾನ್ಯ ಜನರಂತೆಯೇ ಪ್ರಕರಣವನ್ನು ಎದುರಿಸಿದ್ದು, ಅವರಿಗೆ ನೀಡುವಂತಹ ರೀತಿಯಲ್ಲಿಯೇ ನನಗೂ ತೀರ್ಪನ್ನು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 
 
ಇನ್ನು ಸಲ್ಮಾನ್ ಪರ ವಕೀಲರ ವಾದ ಮುಗಿದ ಬಳಿಕ ಪ್ರಾಸಿಕ್ಯಾಶನ್ ಪರ ವಕೀಲರು ವಾದ ಮಂಡಿಸಿದ್ದು, ಆರೋಪಿಗೆ 10 ವರ್ಷ ಶಿಕ್ಷೆ ವಿಧಿಸಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಪ್ರಮಾಣವು ಇಂದು ಮಧ್ಯಾಹ್ನ 1.10ಕ್ಕೆ ಪ್ರಕರಗೊಳಿಸಲಾಗುತ್ತದೆ ಎನ್ದುನಲಾಗುತ್ತಿದ್ದು, ಪ್ರಸ್ತುತ ವಿಚಾರಣೆಯನ್ನು ಮುಂದೂಡಲಾಗಿದೆ. 

Share this Story:

Follow Webdunia kannada