Webdunia - Bharat's app for daily news and videos

Install App

ಕೃಷಿ ವಿವಿ ಸಭಾಂಗಣದಲ್ಲಿ ಬಾರ್ ಹುಡುಗಿಯರ ಅಶ್ಲೀಲ ನೃತ್ಯ

Webdunia
ಭಾನುವಾರ, 31 ಆಗಸ್ಟ್ 2014 (10:33 IST)
ಈ ಚಿತ್ರಗಳು ಬಾರ್ ಡ್ಯಾನ್ಸ್ ಕ್ಲಬ್‌ಗಳಲ್ಲಿ ತುಂಡುಡುಗೆ ಧರಿಸಿದ ಯುವತಿಯರು ನೃತ್ಯ ಮಾಡುವುದನ್ನು ನೆನಪಿಸುತ್ತದೆ. ಆದರೆ ಇದು ಬಿಹಾರ ಕೃಷಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಘಟನೆಯಾಗಿದ್ದು, ವಿವಿಯ ಪಾವಿತ್ರ್ಯಕ್ಕೆ ಧಕ್ಕೆಯಾಯಿತು ಮತ್ತು ವಿವಿಯ ವಾತಾವರಣವನ್ನು ಕೆಡಿಸಿತು. ಬಾರ್ ಹುಡುಗಿಯರು ತುಂಡುಡುಗೆ ಧರಿಸಿ ಅಶ್ಲೀಲ ನೃತ್ಯಪ್ರದರ್ಶನ ಮಾಡುವಾಗ ವಿವಿಯ ಅಧಿಕಾರಿಗಳು ಅವರ ಜೊತೆ ಹೆಜ್ಜೆ ಹಾಕಿ ಕಾಲುಗಳನ್ನು ಕುಣಿಸಿದ್ದರು.
 
 ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತರಪಡಿಸಿದ ಬಾಗಲ್ಪುರ ಸಂಸದ ಬುಲೋ ಮಂಡಲ್ ಮುಖ್ಯಮಂತ್ರಿಗೆ ಪತ್ರ ಬರೆದು ಉಪಕುಲಪತಿ ಚೌಧರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಆದರೆ ಖಾಸಗಿ ಕಂಪನಿ ಆಯೋಜಿಸಿದ ಕಾರ್ಯಕ್ರಮದ ಸ್ವರೂಪದ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ವಿ.ಸಿ. ಚೌಧರಿ ಹೇಳಿದ್ದಾರೆ.

ವಿವಿ ಆಡಳಿತ ಇದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಿದೆ. ರೈತರನ್ನು ಸನ್ಮಾನಿಸಲು ಮಹೀಂದ್ರ & ಮಹೀಂದ್ರ ಕಂಪನಿ ಈ ಕಾರ್ಯಕ್ರಮ ಆಯೋಜಿಸಿತ್ತು. ರಾಜ್ಯದ ಅನೇಕ ಜಿಲ್ಲೆಗಳಿಂದ ರೈತರನ್ನು ಆಹ್ವಾನಿಸಿ  ಸನ್ಮಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಾಂಸ್ಕೃತಿಕ ಕಾರ್ಯಕ್ರಮ ಅಶ್ಲೀಲತೆಯ ಪ್ರದರ್ಶನವಾಗಿ ತಿರುಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments