Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ರೈಲಿನಿಂದ ಬಾಲಕಿಯನ್ನು ಹೊರಗೆ ತಳ್ಳಿ ಹತ್ಯೆ ಮಾಡಿದ ಬಾಯ್‌ಫ್ರೆಂಡ್

ಚಲಿಸುತ್ತಿದ್ದ ರೈಲಿನಿಂದ ಬಾಲಕಿಯನ್ನು ಹೊರಗೆ ತಳ್ಳಿ ಹತ್ಯೆ ಮಾಡಿದ ಬಾಯ್‌ಫ್ರೆಂಡ್
ಸಾಹೀಬ್‌ಗಂಜ್ , ಶುಕ್ರವಾರ, 24 ಏಪ್ರಿಲ್ 2015 (15:15 IST)
ಪ್ರಿಯತಮನೊಂದಿಗೆ ಪರಾರಿಯಾಗಿದ್ದ 15 ವರ್ಷದ ಬಾಲಕಿಯನ್ನು ಆಕೆಯ ಪ್ರಿಯಕರನೇ ಚಲಿಸುತ್ತಿರುವ ರೈಲಿನಿಂದ  ಹೊರತಳ್ಳಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಸಾಹೀಬ್‌ಗಂಜ್‌ನಲ್ಲಿ ಮಾಲ್ದಾ-ಜಮಾಲ್‌ಪುರ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಬಾಲಕಿ, ತನ್ನ ಬಾಯ್‌ಫ್ರೆಂಡ್ ಸದಾಮ್ ಹುಸೈನ್ ಮತ್ತು ಆತನ ಗೆಳೆಯ ಇಮಾಮುದ್ದೀನ್ ಅನ್ಸಾರಿಯೊಂದಿಗೆ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  

ಬಿಹಾರ್‌ನ ಭಾಗಲ್ಪುರ್ ಜಿಲ್ಲೆಯ ಪಿರಾಪೈಂತಿ ಗ್ರಾಮದ ನಿವಾಸಿಯಾಗಿದ್ದ ಬಾಲಕಿ,ರೈಲು ಸಾಹೀಬ್‌ಗಂಜ್‌ನಿಂದ ಐದು ಕಿ.ಮೀ ದೂರ ಚಲಿಸಿದ ನಂತರ ಮಹಾದೇವ್‌ ಗಂಜ್‌ ಕ್ರಾಸಿಂಗ್‌ ಬಳಿ ರೈಲಿನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳದಲ್ಲಿದ್ದ ಪೊಲೀಸರು ಬಾಲಕಿಯ ಪ್ರಿಯಕರ ಮತ್ತು ಆತನ ಗೆಳೆಯ ಅನ್ಸಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.   

ಏತನ್ಮಧ್ಯೆ, ಸಮತೋಲನ ತಪ್ಪಿ ಬಾಲಕಿಯೇ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ಅದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

ಬಾಲಕಿ ಅಪ್ರಾಪ್ತಳಾಗಿದ್ದು ಆಕೆಯನ್ನು ಹುಸೈನ್ ಎನ್ನುವ ವ್ಯಕ್ತಿ ಅಪರಿಸಿದ್ದಾನೆ ಎಂದು ಬಾಲಕಿಯ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Share this Story:

Follow Webdunia kannada