Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್‌‌ ಹೀರೋಯಿನ್ ಮಾಡಿಸ್ತೀನಿ ಎಂದು ಅತ್ಯಾಚಾರ ಮಾಡಿದ

ಸಲ್ಮಾನ್ ಖಾನ್‌‌ ಹೀರೋಯಿನ್ ಮಾಡಿಸ್ತೀನಿ ಎಂದು ಅತ್ಯಾಚಾರ ಮಾಡಿದ
ಜೈಪುರ್ , ಶನಿವಾರ, 2 ಮೇ 2015 (11:17 IST)
ಬಾಲಿವುಡ್‌ ಸ್ಟಾರ್ ಸಲ್ಮಾನ್ ಖಾನ್ ಜತೆ ನಾಯಕಿಯಾಗಿ ಅಭಿನಯಿಸುವ ಅವಕಾಶ ಕೊಡಿಸುತ್ತೇನೆ ಎಂದು ಪುಸಲಾಯಿಸಿದ ಜ್ಯುವೆಲ್ಲರಿ ಅಂಗಡಿ ಮಾಲೀಕನೊಬ್ಬ ಆಕೆಯ ಮೇಲೆ ಜೈಪುರದ ಹೊಟೆಲ್ ಒಂದರಲ್ಲಿ ಅತ್ಯಾಚಾರ ಮಾಡಿದ್ದಾನೆ. 


ಮುಂಬೈನಲ್ಲಿ ಚಿನ್ನದಂಗಡಿ ಉದ್ಯಮ ನಡೆಸುವ ಆರೋಪಿ  ತಾನು ಆಕೆಯ ಮೇಲೆ ಅತ್ಯಾಚಾರ ಎಸಗಿದ ದೃಶ್ಯಾವಳಿಗಳನ್ನು  ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಯುವತಿಗೆ ವಾಟ್ಸಪ್ ಮೂಲಕ ಕಳಿಸಿದ್ದಾನೆ. 
 
ಕೆಲವು ದಿನಗಳ ಹಿಂದಷ್ಟೇ ಜೈಪುರದಲ್ಲಿ ಯುವತಿಗೆ ಉದ್ಯಮಿಯ ಪರಿಚಯವಾಗಿತ್ತು. ನೋಡಲು ಸುಂದರವಾಗಿರುವ ಆಕೆಗೆ ನನಗೆ ಬಾಲಿವುಡ್ ಮಂದಿ ಚೆನ್ನಾಗಿ ಗೊತ್ತು. ನಿನ್ನನ್ನು ಸಲ್ಮಾನ್ ಖಾನ್ ಜೊತೆ ಹೀರೋಯಿನ್ ಮಾಡ್ತೀನಿ ಎಂದಾತ ನಂಬಿಸಿದ್ದ. 
 
ಅಮಾಯಕ ಯುವತಿಯನ್ನು ಸಂಪೂರ್ಣವಾಗಿ ತನ್ನ ವಿಶ್ವಾಸಕ್ಕೆ ತೆಗೆದುಕೊಂಡ ಆತ ಆಕೆಯನ್ನು ಹೋಟೆಲ್‍ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.
 
ಜೈಪುರದ ಶ್ಯಾಮ್ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಉದ್ಯಮಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada