Select Your Language

Notifications

webdunia
webdunia
webdunia
webdunia

ಎರಡು ವರ್ಷಗಳ ಕಾಲ ಬಾಲಕಿಯನ್ನು ಗೃಹಬಂಧನದಲ್ಲಿಟ್ಟು,ನಿರಂತರ ಅತ್ಯಾಚಾರ

ಎರಡು ವರ್ಷಗಳ ಕಾಲ ಬಾಲಕಿಯನ್ನು ಗೃಹಬಂಧನದಲ್ಲಿಟ್ಟು,ನಿರಂತರ ಅತ್ಯಾಚಾರ
ಒಡಿಸಾ , ಶನಿವಾರ, 24 ಜನವರಿ 2015 (18:05 IST)
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸತತ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಡಿಪ್ಲೋಮಾ ಇಂಜಿನಿಯರ್ ಪದವೀದರ ಆರೋಪಿಯನ್ನು ಒಡಿಸಾ ಪೊಲೀಸರು ಬಂಧಿಸಿದ್ದಾರೆ. 
ಕಂಧಾಮಲ್ ಜಿಲ್ಲೆಯ ತಿಕಾಬೈಲ್  ಎಂಬಲ್ಲಿ  ಈ ಘಟನೆ ನಡೆದಿದ್ದು ಮುಖ್ಯ ಆರೋಪಿ ಗೋಲಕಾ ಬಿಹಾರಿ ದಿಗಲ್( 27) , ಆತನ ತಂದೆ ಪ್ರಶಾಂತ್ ದಿಗಲ್( 49) ಮತ್ತು ತಾಯಿ ಸುಭಾಷಿಣಿ (49) ಅವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಕೆವಿ  ಸಿಂಗ್ ಹೇಳಿದ್ದಾರೆ. 
 
ಆರೋಪಿಯ ತಂದೆ-ತಾಯಿಗಳ ಮೇಲೆ ಬಾಲಕಿಯನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಲ್ಲದೇ ಆಕೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಕ್ಕೆ ಮತ್ತು ಮಗನನ್ನು ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. 
 
ನಿರುದ್ಯೋಗಿಯಾಗಿರುವ ಗೋಲಕಾ  ನಿನ್ನನ್ನು ಮದುವೆಯಾಗುತ್ತೇನೆ ಎಂದು  ಗಂಜಮ್ ಜಿಲ್ಲೆಯ ನಿವಾಸಿಯಾಗಿದ್ದ ಬಾಲಕಿಗೆ ವಾಗ್ದಾನ ಮಾಡಿ ಮನೆಗೆ ಕರೆ ತಂದಿದ್ದ. ಆಕೆಯನ್ನು ಮನೆಗೆಲಸದವಳಾಗಿ ಇಟ್ಟುಕೊಂಡ ಆತನ ತಂದೆತಾಯಿಗಳು ನಿರಂತರ ಕಿರುಕುಳವನ್ನು ನೀಡಿದರೆ, ಗೋಲಕಾ ಆಕೆಯನ್ನು ದೈಹಿಕವಾಗಿ ಬಳಸಿಕೊಂಡ ಎಂದು ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ. ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ಬಾಲಕಿಯ ದುಃಸ್ಥಿತಿಯ ಬಗ್ಗೆ ಮಾಹಿತಿ ದೊರೆತಾಗ ವಿಷಯ ಬೆಳಕಿಗೆ ಬಂದಿದೆ. 

Share this Story:

Follow Webdunia kannada