Webdunia - Bharat's app for daily news and videos

Install App

ಫೇಸ್‌ಬುಕ್‌ನಲ್ಲಿ ಗೆಳೆಯನ ನಗ್ನ ಭಾವಚಿತ್ರಗಳನ್ನು ಪೋಸ್ಟ್ ಮಾಡಿದ ಯುವತಿ

Webdunia
ಬುಧವಾರ, 13 ಆಗಸ್ಟ್ 2014 (13:13 IST)
ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರ ಬೆತ್ತಲೆ ಪೋಟೋಗಳನ್ನು ಪೋಸ್ಟ್ ಮಾಡುವ ಧೂರ್ತ ಯುವಕರ ಕುಕೃತ್ಯಗಳ ಬಗ್ಗೆ ನೀವು ಓದೇ ಇರುತ್ತೀರಿ. ಆದರೆ ಈ ಘಟನೆ ತದ್ವಿರುದ್ಧವಾಗಿದ್ದು, ಗೆಳೆಯ ತನ್ನನ್ನು ಕಡೆಗಣಿಸುತ್ತಿದ್ದಾನೆ ಎಂಬ ಕೋಪದಲ್ಲಿ ಹುಡುಗಿಯೊಬ್ಬಳು ಆತನ ನಗ್ನ ಭಾವಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ  ಪ್ರಕಟಿಸುವುದರೊಂದಿಗೆ ಸೇಡು ತೀರಿಸಿಕೊಂಡಿದ್ದಾಳೆ. 

ಉದಯೋನ್ಮುಖ ವಾಣಿಜ್ಯೋದ್ಯಮಿ ದೇವೇಶ್ ಶರ್ಮಾ ಕಳೆದ ತಿಂಗಳು 20 ವರ್ಷದ ಯುವತಿಯ ಜತೆ ಫೇಸ್‌ಬುಕ್‌ನಲ್ಲಿ  ಸ್ನೇಹಿತನಾದ. ಆಕೆಯ 23 ವರ್ಷದ ಅಕ್ಕನಿಗೆ ತನ್ನ ಕಚೇರಿಯಲ್ಲಿ ಟೆಲಿ ಕಾಲರ್ ಉದ್ಯೋಗ ಕೊಡಿಸುವುದಾಗಿ ಆತ  ಭರವಸೆ ನೀಡಿದ ಮೇಲೆ ಅವರಿಬ್ಬರ ಗೆಳೆತನ ಗಟ್ಟಿಯಾಯಿತು. ಗೆಳೆತನ ಗಟ್ಟಿಯಾಗುತ್ತಿದ್ದಂತೆ ನಗರ ಸುತ್ತಾಡಿಸಲು, ಪಾರ್ಟಿಗಳಿಗೆ ಕರೆದೊಯ್ಯು ಎಂದು ಆಕೆ ದುಂಬಾಲು ಬೀಳತೊಡಗಿದಳು. 
 
ಫ್ರೆಂಡಶಿಫ್ ದಿನದಂದು ಅವರಿಬ್ಬರು ಪಾರ್ಟಿಗೆ ಹೋಗಲು ನಿರ್ಧರಿಸಿದರು. ಅಂದು ಯುವತಿ  ತನಗೆ 4,500 ರೂಪಾಯಿಗಳ ಹೆಂಡ್ ಬ್ಯಾಗ್, 9,000 ರೂಪಾಯಿಯ ಮಿನಿಸ್ಕರ್ಟ್ ಕೊಡಿಸುವಂತೆ ಆತನನ್ನು ಕಾಡತೊಡಗಿದಳು. ಹಾಗಾಗಿ ಆತ ಪಾರ್ಟಿಗೆ ಹೋಗುವ ಯೋಜನೆಯನ್ನು ಕೈಬಿಟ್ಟ. 
 
ಅಲ್ಲಿಯವರೆಗೆ ಅವರಿಬ್ಬರು ಅಂತರ್ಜಾಲ ಮತ್ತು ಮೊಬೈಲ್ ಮೂಲಕವಷ್ಟೇ ಸಂಪರ್ಕದಲ್ಲಿದ್ದರು. 
 
ದುಬಾರಿ ಉಡುಗೊರೆ ನೀಡುವಂತೆ ಆಕೆಯ ಕಾಟ ತಾಳದಾದಾಗ ಆಕೆಯಲ್ಲಿ ಆಸಕ್ತಿ ಕಳೆದುಕೊಂಡ ಆತ ಆಕೆಯಿಂದ ನಿಧಾನವಾಗಿ ದೂರ ಸರಿಯತೊಡಗಿದ. ಇದನ್ನು ಸಹಿಸದಾದ ಅವಳು ಆಗಸ್ಟ್ 4ರಂದು ಶರ್ಮಾಗೆ 100 ಬಾರಿ ಪೋನ್ ಕರೆ  ಮತ್ತು 50ಕ್ಕೂ ಹೆಚ್ಚು ಸಂದೇಶ ಕಳುಹಿಸಿ ತನ್ನ ಬೇಡಿಕೆ ತೀರಿಸದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುವುದು ಎಂದು ಬೆದರಿಕೆ ಹಾಕಿದಳು. 
 
ತನ್ನಲ್ಲಿ 2,00,000 ರೂಪಾಯಿಗಳನ್ನು ಕೊಡುವಂತೆ ಕೇಳಿದ ಆಕೆ ಸಾಧ್ಯವಾಗದು ಎಂದಾಗ 20,000 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕು ಎಂಬ ಬೇಡಿಕೆ ಇಟ್ಟಳು.  ಆ ಘಟನೆಯ ನಂತರ ಆಕೆಯನ್ನಾತ ಸಂಪೂರ್ಣವಾಗಿ  ದೂರವಿರಿಸಿದ. 
 
ಇದರಿಂದ ಕೋಪಗೊಂಡ ಆಕೆ ಶರ್ಮಾ ಫೇಸ್‌ಬುಕ್‌ ಪ್ರೊಫೈಲ್‌ನಿಂದ ಆತನ ಫೋಟೋಲನ್ನು ಡೌವ್ನಲೋಡ್ ಮಾಡಿಕೊಂಡು ಅಶ್ಲೀಲ ಚಿತ್ರಗಳಿಗೆ ಆತನ ಮುಖದ ಚಿತ್ರವನ್ನು ಅಂಟಿಸಿ, ಆತನ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ಸೃಷ್ಟಿಸಿ ಆ ಪೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ ಎಂದು ಪೀಡಿತ ಯುವಕ ಪೋಲಿಸರಲ್ಲಿ ದೂರು ನೀಡಿದ್ದಾಳೆ. 
 
"ಅಲ್ಲದೇ ಆಕೆ ನನ್ನ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಿ , ನಾನೊಬ್ಬ ಸಲಿಂಗಕಾಮಿ ಎಂದು ಬರೆದಿದ್ದಾಳೆ. ಆಕೆಯ ಈ ಕೃತ್ಯದಿಂದ ನಾನು ಆಘಾತಗೊಂಡಿದ್ದೇನೆ" ಎಂದು ಶರ್ಮಾ ಪೋಲಿಸರಲ್ಲಿ ದೂರು ನೀಡಿದ್ದಾನೆ. ಈ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. 

ಏತನ್ಮಧ್ಯೆ ತನ್ನ ತಪ್ಪಿಗಾಗಿ ಕ್ಷಮೆ ಕೋರಿರುವ ಆಕೆ, ಆ ನಕಲಿ ಖಾತೆಯನ್ನು ಡಿಲಿಟ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ