13 ವರ್ಷದ ಬಾಲಕಿಯನ್ನು ಅಪಹರಿಸಿ 80,000ಕ್ಕೆ ಮಾರಾಟ ಮಾಡಿ 5 ತಿಂಗಳ ಕಾಲ ಅತ್ಯಾಚಾರ ಎಸಗಿದ ಘಟನೆ ಬನಸ್ಕಾಂತ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಪೀಡಿತ ಅಪ್ರಾಪ್ತ ಬಾಲೆಯನ್ನು ಮನ್ಪುರಾ ಗ್ರಾಮದಿಂದ ನಿನ್ನೆ ರಾತ್ರಿ ರಕ್ಷಿಸಲಾಗಿದ್ದು, ಅತ್ಯಾಚಾರಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಲಕಿ ರಾಜಸ್ಥಾನದ ಉದೈಪುರದವಳಾಗಿದ್ದು ಕೃಷಿ ಕೂಲಿಗಾಗಿ ಆಕೆಯನ್ನು ಬನಸ್ಕಾಂತ ಜಿಲ್ಲೆಗೆ ಕರೆತರಲಾಗಿತ್ತು. ಕಳೆದ 5 ತಿಂಗಳ ಹಿಂದೆ ಮುಕೇಶ್‌ಭಾಯ್ ವಾಡಿ, ಮಕ್ವಾನಾ ಮತ್ತು ವಿಷ್ಣು ಠಾಕೋರ್ ಎಂಬ ಮೂರು ಜನ ಸೇರಿ ಆಕೆಯನ್ನು ಅಪಹರಿಸಿ ಮನ್ಪುರಾ ಗ್ರಾಮದ ಖೋಡಾಭಾಯ್ ಠಾಕೋರ್ ಎಂಬಾತನಿಗೆ ಮಾರಾಟ ಮಾಡಿದ್ದರು. ಜ್ಞಾನ್ಜಿಭಾಯ್ ಠಾಕೋರ್ ಮತ್ತು ರಾನುಬಾ ಠಾಕೋರ್ ಈ ಡೀಲ್‌ನ್ನು ಕುದುರಿಸಿದ್ದರು.
ಬಾಲಕಿಯನ್ನು ತೋಟದ ಮನೆಯಲ್ಲಿ ಕೂಡಿಟ್ಟಿದ್ದ ಖೋಡಾಭಾಯ್ ಅನೇಕ ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮತ್ತೀಗ ಎಲ್ಲ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.