ಮನೆಯವರಿಂದ ತಪ್ಪಿಸಿಕೊಳ್ಳಲು ಸುಳ್ಳು ಸುಳ್ಳು ಲೈಂಗಿಕ ದೌರ್ಜನ್ಯದ ಕಥೆ ಕಟ್ಟಿದ ಅಪ್ರಾಪ್ತೆ

Webdunia
ಶನಿವಾರ, 28 ನವೆಂಬರ್ 2020 (09:28 IST)
ರಾಯ್ ಪುರ : ಮನೆಗೆ ತಡವಾಗಿ ಮರಳಿದ 14 ವರ್ಷದ ಹುಡುಗಿಗೆ ಹೆತ್ತವರು ಗದರಿದಕ್ಕೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸುಳ್ಳು ಹೇಳಿದ ಘಟನೆ ಛತ್ತೀಸ್ ಗಢದ ಕಾವರ್ಧಾ ಜಿಲ್ಲೆಯಲ್ಲಿ ನಡೆದಿದೆ.

ಹುಡುಗಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೊರಗೆ ಹೋಗಿದ್ದಾಳೆ. ಆದರೆ ಆಕೆ ಮನೆಗೆ ಬರದ ಕಾರಣ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತಡರಾತ್ರಿ ಹುಡುಗಿ ಮನೆಗೆ ಬಂದಾಗ ಮನೆಯವರ ಬೈಗುಳದಿಂದ ತಪ್ಪಿಸಿಕೊಳ್ಳಲು ತನ್ನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಕಥೆ ಕಟ್ಟಿದ್ದಾಳೆ. ತನ್ನ ಸ್ನೇಹಿತನೊಂದಿಗೆ ಇದ್ದಾಗ 6 ಮಂದಿ ಪುರುಷರು ಮಾನಭಂಗ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಯಾವುದೇ ಸುಳಿಯು ಸಿಗಲಿಲ್ಲ. ಕೊನೆಗೆ ಪೊಲೀಸರು ಹುಡುಗಿಯ ಮೇಲೆ ಅನುಮಾನಗೊಂಡು ಇಬ್ಬರನ್ನು ವಿಚಾರಣೆ ನಡೆಸಿದಾಗ ಹುಡುಗಿ ಹುಡುಗನ ಜೊತೆ ಲೈಂಗಿಕ ಸಂಬಂಧ ಹೊಂದಿರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಸ್ ಓಡಿಸುತ್ತಲೇ ಮೊಬೈಲ್ ನಲ್ಲಿ ಲಲ್ಲೆ ಹೊಡೆಯುತ್ತಿದ್ದ ಚಾಲಕ: Video

ತರಬೇತಿ ಕ್ಲಾಸ್‌ಗೆ ಮಂಗನ ಎಂಟ್ರಿ: ಗುಜರಾತ್‌ನಲ್ಲಿ ಶಿಕ್ಷಕರ ಸೆಷನ್ ಮಧ್ಯೆ ವಾನರನ ಹವಾ Video

Video: ಯಮುನಾ ನದಿ ತೀರದಲ್ಲಿ ದೈತ್ಯ ಜಿರಳೆಗಳ ದಂಡು ಕಂಡು ದಂಗಾದ ಜನ

ಓಡು ಓಡಲೇ... ಪೆಟ್ರೋಲ್ ಗಾಗಿ ಕ್ಯಾನ್ ಹಿಡ್ಕೊಂಡು ಓಡಿದ ಜನ ಸಾಗರ Video

ಕಾಕ್ರೋಚ್ ಜನತಾ ಪಾರ್ಟಿ ಮುಂದೆ ಚುನಾವಣೆಗೆ ಸ್ಪರ್ಧಿಸುತ್ತದೆಯೇ: ಕುತೂಹಲಕಾರಿ ವಿವರ ಇಲ್ಲಿದೆ

ಮುಂದಿನ ಸುದ್ದಿ