Select Your Language

Notifications

webdunia
webdunia
webdunia
webdunia

ಲಾಲ್‌ಬಾಗ್ ಕೆರೆಯಲ್ಲಿ ಯುವತಿಯ ಶವ ಪತ್ತೆ

ಲಾಲ್‌ಬಾಗ್ ಕೆರೆಯಲ್ಲಿ ಯುವತಿಯ ಶವ ಪತ್ತೆ
ಬೆಂಗಳೂರು , ಬುಧವಾರ, 12 ನವೆಂಬರ್ 2014 (10:24 IST)
ಬೆಂಗಳೂರಿನ ಪ್ರಸಿದ್ಧ ಲಾಲ್‌ಬಾಗ್ ಸಸ್ಯೋದ್ಯಾನದ ಕೆರೆಯಲ್ಲಿ ಅಪರಿಚಿತ ಯುವತಿಯ ಶವವೊಂದು ಪತ್ತೆಯಾಗಿದೆ.

ಉದ್ಯಾನವನದ ವೆಸ್ಟ್ ಗೇಟ್ ಬಳಿ ಇರುವ ಕೆರೆಯಲ್ಲಿ ಇಂದು ಬೆಳಿಗ್ಗೆ 17 ವರ್ಷದ ಹುಡುಗಿಯ ಶವ ಪತ್ತೆಯಾಗಿದ್ದು, ಆಕೆಯ ಗುರುತು ಪತ್ತೆಯಾಗಿಲ್ಲ.
 
ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪ್ರೇಮ ವೈಫಲ್ಯ ಅಥವಾ ಕೌಟುಂಬಿಕ ಸಮಸ್ಯೆಗಳಿಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. 
 
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಳ ಗುರುತು ಪತ್ತೆಗಾಗಿ ಪ್ರಯತ್ನ ನಡೆಸಲಾಗುತ್ತಿದೆ. 

Share this Story:

Follow Webdunia kannada