Select Your Language

Notifications

webdunia
webdunia
webdunia
webdunia

ರೇಪ್ ವಿರೋಧಿಸಿದ ಯುವತಿಯನ್ನು ಜೀವಂತವಾಗಿ ದಹಿಸಿದ ಆರೋಪಿ

ರೇಪ್ ವಿರೋಧಿಸಿದ ಯುವತಿಯನ್ನು ಜೀವಂತವಾಗಿ ದಹಿಸಿದ ಆರೋಪಿ
ಮಥುರಾ , ಬುಧವಾರ, 10 ಫೆಬ್ರವರಿ 2016 (19:22 IST)
ಜಿಲ್ಲೆಯ ಔರಾಂಗಾಬಾದ್ ಗ್ರಾಮದಲ್ಲಿ ಹದಿಹರೆಯದ ಯುವತಿಯೊಬ್ಬಳು ಅತ್ಯಾಚಾರ ಯತ್ನವನ್ನು ವಿರೋಧಿಸಿದ್ದಕ್ಕೆ ಆರೋಪಿ ಯುವಕ ಆಕೆಯನ್ನು ಜೀವಂತವಾಗಿ ದಹಿಸಿದ ಹೇಯ ಘಟನೆ ವರದಿಯಾಗಿದೆ.
 
ಮನೆಯಲ್ಲಿ ಪೋಷಕರು ಇಲ್ಲದಿರುವುದನ್ನು ಕಂಡ ಆರೋಪಿ ಭೋಲಾ, ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಹದಿಹರೆಯದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ತೀವ್ರವಾಗಿ ವಿರೋಧಿಸಿದಾಗ ಯುವಕ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆರೋಪಿ ಭೋಲಾ ವಿರುದ್ಧ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದರಿಂದ ಆತನ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ ತಿಳಿಸಿದ್ದಾರೆ.
 
ಭೋಲಾ ನಿರಂತರವಾಗಿ ಯುವತಿಯನ್ನು ಪೀಡಿಸುತ್ತಾ ಅಶ್ಲೀಲ ಪದಗಳನ್ನು ಬಳಸುತ್ತಿದ್ದನು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ನೋಡಿ ಮನೆಯೊಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಹತ್ಯೆಯಾದ ಯುವತಿಯ ಚಿಕ್ಕಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

Share this Story:

Follow Webdunia kannada